ಮೈಸೂರು

ನಂದಿನಿ ಹಾಲಿನ ಕೇಂದ್ರ ಉದ್ಘಾಟನೆ

ಗ್ರಾಹಕರು ದುಡ್ಡು ನೀಡಿದ್ದಕ್ಕೆ ಸರಿಯಾಗಿ ಅವರಿಗೆ ಉತ್ತಮ ಗುಣಮಟ್ಟದ ಹಾಲು ಸಿಗಬೇಕೆಂದು ಚಾಮರಾಜನಗರ ಹಾಲು ಉತ್ಪಾದನಾ ಸಮಿತಿಯ ನಿರ್ದೇಶಕ ಪಿ.ಎಮ್‍. ಪ್ರಸನ್ನ ಹೇಳಿದರು.

ಬೈಲಕುಪ್ಪೆಯ ರಾವಂದೂರಿನಲ್ಲಿ ನಂದಿನಿ ಹಾಲು ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪಿರಿಯಾಪಟ್ಟಣ ತಾಲೂಕಿನಲ್ಲಿ ಈಗಾಗಲೇ ಮೂರು ನಂದಿನಿ ಹಾಲಿನ ಕೇಂದ್ರಗಳನ್ನು ಆರಂಭಿಸಲಾಗಿದೆ. ಕಣಗಾಲು ಮತ್ತು ಕೊಪ್ಪ ಕಿತ್ತೂರಿನಲ್ಲಿ ಮತ್ತೆ ಮೂರು ಹಾಲಿನ ಕೇಂದ್ರಗಳನ್ನು ತೆರೆಯುವ ಬಗ್ಗೆ ಮಾತುಕತೆಗಳು ನಡೆಯುತ್ತಿದೆ. ಇದರಿಂದ ಜನರಿಗೆ ಹಾಲಿನ ಉತ್ಪನ್ನಗಳು ಲಭ್ಯವಾಗುವುದಲ್ಲದೆ, ಸಮಿತಿಯ ಆದಾಯ ಹೆಚ್ಚಲಿದೆ ಎಂದು ಅವರು ಹೇಳಿದರು.

ಮೈಸೂರು-ಚಾಮರಾಜನಗರ ಹಾಲು ಉತ್ಪಾದನಾ ಸಮಿತಿಯ ಅಧ್ಯಕ್ಷ ಕೆ.ಜೆ.ಮಹೇಶ್, ನಿರ್ದೇಶಕ ಸೋಮಶೇಖರ್, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಜವರಪ್ಪ ಮತ್ತು ಇತರರು ಉಪಸ್ಥಿತರಿದ್ದರು.

 

Leave a Reply

comments

Related Articles

error: