ಸುದ್ದಿ ಸಂಕ್ಷಿಪ್ತ

ಆರ್ಮಿ, ನೇವಿ, ಏರ್ ಫೋರ್ಸ್ ಹುದ್ದೆಗೆ ಅರ್ಜಿ ಆಹ್ವಾನ

ಮೈಸೂರು,ಜೂ.13-ಕೇಂದ್ರ ಲೋಕ ಸೇವಾ ಆಯೋಗ, ನವದೆಹಲಿ ಸಂಸ್ಥೆ ರಕ್ಷಣಾ ಪಡೆಗಳಾದ  ಆರ್ಮಿ, ನೇವಿ  ಮತ್ತು ಏರ್‍ಫೋರ್ಸ್‍ಗಳಲ್ಲಿ ಖಾಲಿ ಇರುವ ಒಟ್ಟು 390  ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಆರ್ಮಿ ವಿಭಾಗಕ್ಕೆ ಅರ್ಜಿ ಸಲ್ಲಿಸುವವರು  ಕಲೆ/ ವಾಣಿಜ್ಯ/ವಿಜ್ಞಾನ ವಿಷಯದಲ್ಲಿ ದ್ವಿತೀಯ ಪಿ.ಯು.ಸಿ.ಯಲ್ಲಿ  ತೇರ್ಗಡೆಯಾಗಿರಬೇಕು.  ನೇವಿ  ಮತ್ತು ಏರ್‍ಫೋರ್ಸ್ ವಿಭಾಗಕ್ಕೆ ಅರ್ಜಿ ಸಲ್ಲಿಸುವವರು ಪಿ.ಯು.ಸಿ.ಯಲ್ಲಿ ವಿಜ್ಞಾನ (ಭೌತಶಾಸ್ತ್ರ & ಗಣಿತ) ವಿಷಯಗಳಲ್ಲಿ ತೇರ್ಗಡೆಯಾಗಿರಬೇಕು. ಪ್ರಸಕ್ತ ಸಾಲಿನಲ್ಲಿ ಅಂತಿಮ ವರ್ಷದ ಪಿ.ಯು.ಸಿ., ವ್ಯಾಸಂಗ ಮಾಡುತ್ತಿರುವವರೂ ಸಹ ಅರ್ಜಿ ಸಲ್ಲಿಸಬಹುದು.

ಅರ್ಜಿಯನ್ನು www.upsconline.nic.in ವೆಬ್ ಸೈಟ್ ನಲ್ಲಿ   ಆನ್‍ಲೈನ್ ಮೂಲಕ ಜೂ.30 ರೊಳಗೆ ಸಲ್ಲಿಸಬೇಕು.  ಹೆಚ್ಚಿನ ಮಾಹಿತಿಗೆ ಉಪ ಮುಖ್ಯಸ್ಥರು, ಉದ್ಯೋಗ ಮಾಹಿತಿ ಮತ್ತು ಮಾರ್ಗದರ್ಶನ ಕೇಂದ್ರ, ಗ್ರಂಥಾಲಯ ಕಟ್ಟಡ, ಮಾನಸಗಂಗೋತ್ರಿ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು ಇಲ್ಲಿ ಸಂಪರ್ಕಿಸಬಹುದು. (ಎಂ.ಎನ್)

 

 

 

Leave a Reply

comments

Related Articles

error: