ಮೈಸೂರು

‘ಗಿರಿಜಾ ಕಲ್ಯಾಣ’ ನಾಟಕ ಪ್ರದರ್ಶನ

play1ರಂಗಾಯಣದ ಭೂಮಿಗೀತದಲ್ಲಿ ಗುರುವಾರ ಸಂಜೆ ಬಾಸುದೇವ ಸೋಮಾನಿ ಕಾಲೇಜಿನ ವಿದ್ಯಾರ್ಥಿಗಳು ‘ಗಿರಿಜಾ ಕಲ್ಯಾಣ’ ನಾಟಕ ಪ್ರದರ್ಶಿಸಿದರು.

ರಾಜ್ಯದ ರೈತರ ಸ್ಥಿತಿ ಮತ್ತು ಆತ್ಮಹತ್ಯೆಯ ಬಗ್ಗೆ ರೈತನೊಬ್ಬನ ಪತ್ನಿಯ ಅನಿಸಿಕೆ ಮತ್ತು ಆಕೆಗೆ ಎದುರಾಗುವ ಸಮಸ್ಯೆಗಳು ಮತ್ತು ನಗರೀಕರಣ ಮತ್ತು ಆಡಳಿತ ವರ್ಗದಿಂದಾಗಿ ರೈತರು ಏನೆಲ್ಲ ಕಷ್ಟಗಳನ್ನು ಎದುರಿಸುತ್ತಾರೆ ಎಂಬುದನ್ನು ಈ ನಾಟಕವು ಮನಮುಟ್ಟುವಂತೆ ಚಿತ್ರಿಸಿದೆ.

ರೈತನ ಮಡದಿ ಗಿರಿಜಾ ಈ ನಾಟಕದ ಕೇಂದ್ರಬಿಂದಾಗಿದ್ದು, ಪ್ರಸ್ತುತ ಕಾಲಘಟ್ಟದಲ್ಲಿ ರೈತರ ಆತ್ಮಹತ್ಯೆಯಿಂದ ಅವರ ಪತ್ನಿಯರು ಏನೆಲ್ಲ ಕಷ್ಟಪಡುತ್ತಾರೆ ಎಂಬುದನ್ನು ಮನೋಜ್ಞವಾಗಿ ಅಭಿನಯಿಸಿದ್ದಾರೆ.

‘ಬಿ.ಸುರೇಶ್ ವಿರಚಿತ ಗಿರಿಜಾ ಕಲ್ಯಾಣ’ ನಾಟಕವನ್ನು ವಿಕಾಸ್ ಚಂದ್ರ ನಿರ್ದೇಶಿಸಿದ್ದಾರೆ. ಬಾಸುದೇವ ಸೋಮಾನಿ ಕಾಲೇಜಿನ ಸೌಮ್ಯ ಮತ್ತು ತನುಶ್ರೀ ಸಂಯೋಜಿಸಿದ್ದಾರೆ.

 

Leave a Reply

comments

Related Articles

error: