ಪ್ರಮುಖ ಸುದ್ದಿಮೈಸೂರು

31ನೇ ಸಾವಿರದೊಂದು ಹಾವು ಹಿಡಿದು ನೂತನ ದಾಖಲೆ ನಿರ್ಮಿಸಿದ ಸ್ನೇಕ್ ಶ್ಯಾಂ

ಮೈಸೂರಿನ ಖ್ಯಾತ ಉರಗ ತಜ್ಞ ಸ್ನೇಕ್ ಶ್ಯಾಂ  31ನೇ ಸಾವಿರದೊಂದು ಹಾವು ಹಿಡಿಯುವ ಮೂಲಕ ನೂತನ ದಾಖಲೆಗೆ ನಾಂದಿ ಹಾಡಿದ್ದಾರೆ.

ಕುವೆಂಪು ನಗರದ ರತ್ನ ಎಂಬುವವರ ದ್ವಿಚಕ್ರ ವಾಹನದ ಡಿಕ್ಕಿಯಲ್ಲಿ ಅಡಗಿದ್ದ ಹಾವನ್ನು ಹಾಗೂ ಮೈಸೂರಿನ ರೈಲು ನಿಲ್ದಾಣದ ಎದುರಿನ ಹೋಟೆಲ್ ಅಡುಗೆ ಕೋಣೆಯಲ್ಲಿ ದೋಸೆ ಹಾಕುವ ಸ್ಥಳದ ಪಕ್ಕದಲ್ಲಿನ ಬಿಲದಲ್ಲಿದ್ದ ಹಾವನ್ನು ಹಿಡಿಯುವ ಮೂಲಕ ಈ ದಾಖಲೆ ಸೃಷ್ಟಿಸಿದ್ದಾರೆ.

ಕುವೆಂಪುನಗರದ ರತ್ನ ಎಂಬವರು ಜಗದಾಂಬ ಪೆಟ್ರೋಲ್ ಬಂಕ್ ಬಳಿ ಪೆಟ್ರೋಲ್ ಹಾಕಿಸಲು ಡಿಕ್ಕಿ ತೆರೆದಾಗ ಹಾವಿನ ಬಾಲ ಗೋಚರಿಸಿದೆ. ಇದನ್ನು ಕಂಡ ಅವರ ಬೆಚ್ಚಿ ಬಿದ್ದು ಸ್ಥಳದಿಂದ ದೂರ ಸರಿದಿದ್ದಾರೆ. ಈ ಬಗ್ಗೆ ಸ್ನೇಕ್‍ ಶ್ಯಾಂಗೆ ಸಾರ್ವಜನಿಕರು ಸುದ್ದಿ ಮುಟ್ಟಿಸಿದರು. ಸ್ಥಳಕ್ಕೆ ಆಗಮಿಸಿದ ಸ್ನೇಕ್‍ ಶ್ಯಾಂ ಅವರು ಡಿಕ್ಕಿಯಲ್ಲಿದ್ದ ಹಾವನ್ನು ಹಿಡಿದಿದ್ದಾರೆ.

ಅದರಂತೆ ಹೋಟೆಲ್ ನ ಬಿಲದಲ್ಲಿ ಹಾವಿನ ಬಾಲ ಕಂಡು ಬಂದಿದ್ದು, ಸಿಬ್ಬಂದಿ ಸ್ನೇಕ್ ಶ್ಯಾಮ್ ಗೆ ಪೋನಾಯಿಸಿದ್ದಾರೆ. ತಕ್ಷಣವೇ ಸ್ಥಳಕ್ಕಾಗಮಿಸಿದ ಅವರು ಹಾರೆಯ ನೆರವಿನಿಂದ ಟೈಲ್ಸ್ ಒಡೆದು ಹೆಗ್ಗಣ ನುಂಗಿ ಬಿಲದಲ್ಲಿ ಸಿಕ್ಕಿ ಹಾಕಿಕೊಂಡ ಹಾವನ್ನು ಹಿಡಿದಿದ್ದಾರೆ.  ಈ ಹಾಔನ್ನು ಹಿಡಿಯುವ ಮೂಲಕ ಸ್ನೇಕ್ ಶ್ಯಾಂ 31 ಸಾವಿರದೊಂದನೇ ಹಾವು ಹಿಡಿದ ನೂತನ ದಾಖಲೆ ನಿರ್ಮಿಸಿದರು.

Leave a Reply

comments

Related Articles

error: