ಕರ್ನಾಟಕದೇಶಪ್ರಮುಖ ಸುದ್ದಿ

ರಾಷ್ಟ್ರಪತಿ ಹುದ್ದೆಯ ಕುರಿತು ನಮ್ಮನ್ನು ಯಾರೂ ಸಂಪರ್ಕಿಸಿಲ್ಲ – ಧರ್ಮಸ್ಥಳದಿಂದ ಸ್ಪಷ್ಟನೆ

ಮಂಗಳೂರು, ಜೂನ್ 13 : ರಾಷ್ಟ್ರಪತಿ ಚುನಾವಣೆಯಲ್ಲಿ ಅಭ್ಯರ್ಥಿಯಾಗುವ ಕುರಿತು ತಮ್ಮನ್ನು ಈವರೆಗೂ ಯಾರೂ ಸಂಪರ್ಕಿಸಿಲ್ಲ ಎಂದು ಧರ್ಮಸ್ಥಳದ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ.

ಜುಲೈ ತಿಂಗಳಿನಲ್ಲಿ ಚುನಾವಣೆ ನಡೆಯಲಿದ್ದು ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ಹೆಸರು ಮಾಡಿರುವ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಸರ್ವಸಮ್ಮತ ಅಭ್ಯರ್ಥಿಯಾಗುವ ಸಾಧ್ಯತೆ ಇದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

ಸಾಮಾಜಿಕ ಜಾಲತಾಣಗಳಲ್ಲಿಯೂ ಚರ್ಚೆಗೆ ಒಳಪಟ್ಟಿರುವ ಈ ವಿಷಯ ಧರ್ಮಸ್ಥಳದ ಆಡಳಿತ ಮಂಡಳಿಯ ಕಿವಿಗೂ ತಲುಪಿತ್ತು. ಈ ಕುರಿತು ಸ್ಪಷ್ಟನೆ ನೀಡಿರುವ ಆಡಳಿತ ಮಂಡಳಿ, ಇಂಥಹ ಯಾವುದೇ ಮಾಹಿತಿ ನಮಗೆ ಬಂದಿಲ್ಲ. ಈ ಕುರಿತು ಯಾರೂ ನಮನ್ನು ಸಂಪರ್ಕಿಸಿಲ್ಲ. ಅಂತಹ ಪ್ರಸ್ತಾಪ ಬಂದರೂ ಅದನ್ನು ಧರ್ಮಾಧಿಕಾರಿ ಸ್ವೀಕರಿಸುವ ಸಾಧ್ಯತೆ ಇಲ್ಲ” ಎಂದಿದೆ.

ಬಿಜೆಪಿಯ ಬಳಿ ಹೆಚ್ಚು ಸಂಖ್ಯಾಬಲವಿದೆ. ಆದರೆ ಎನ್‍.ಡಿ.ಎ ಅಂಗಪಕ್ಷಗಳ ಮತಗಳನ್ನು ಒಟ್ಟುಗೂಡಿಸಿದರೂ ಅಲ್ಪ ಮತಗಳ ಕೊರತೆ ಬೀಳಲಿದೆ. ರಾಷ್ಟ್ರಪತಿ ಚುನಾವಣೆಯಲ್ಲಿ ಪಕ್ಷಗಳು ವ್ಹಿಪ್ ಜಾರಿಮಾಡಲು ಸಾಧ್ಯವಿಲ್ಲ. ಪಕ್ಷಾಂತರ ನಿಷೇಧ ಕಾಯ್ದೆಯೂ ಅನ್ವಯಿಸುವುದಿಲ್ಲ. ಆದ್ದರಿಂದ ಪ್ರಾದೇಶಿಕ ಪಕ್ಷಗಳ ಮತಗಳನ್ನು ಎಷ್ಟರಮಟ್ಟಿಗೆ ನಂಬಬಹುದು ಎನ್ನುವ ಲೆಕ್ಕಾಚಾರ ಬಿಜೆಪಿಯೊಳಗೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ. ಈ ದೃಷ್ಟಿಯಿಂದ ವೀರೇಂದ್ರ ಹೆಗ್ಗಡೆಯವರನ್ನು ಅಭ್ಯರ್ಥಿಯನ್ನಾಗಿಸಿದರೆ ಸರ್ವಸಮ್ಮತ ಅಭ್ಯರ್ಥಿಯಾಗಿ ಸಹಮತ ಗಳಿಸಬಹುದು ಎಂಬ ವರದಿಗಳಿದ್ದವು.

ಆದರೆ ಧರ್ಮಸ್ಥಳದ ಧಾರ್ಮಿಕ ಕಾರ್ಯಗಳನ್ನು ಬಿಟ್ಟು ಅವರು ರಾಷ್ಟ್ರಪತಿ ಹುದ್ದೆಯನ್ನು ಒಪ್ಪಿಕೊಳ್ಳುವ ಸಾಧ್ಯತೆ ಎಂದು ಮೂಲಗಳು ತಿಳಿಸಿವೆ.

-ಎನ್.ಬಿ.ಎನ್.

Leave a Reply

comments

Related Articles

error: