ಮೈಸೂರು

ಸಿದ್ದರಾಮಯ್ಯನವರ ಸನ್ಮಾನಕ್ಕೆ ವಿರೋಧ : ಪ್ರತಿಭಟನೆ

ಮೈಸೂರು,ಜೂ.14:- ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸನ್ಮಾನವನ್ನು ವಿರೋಧಿಸಿ ಸರ್ವಧರ್ಮ ಶರಣರ ಒಕ್ಕೂಟದ ವತಿಯಿಂದ ಪ್ರತಿಭಟನೆ ನಡೆಯಿತು.

ಮೈಸೂರು  ಬಸವೇಶ್ವರ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ಎಬಿವಿಎಸ್ ನ ಜಿಲ್ಲಾಧ್ಯಕ್ಷರು ಮತ್ತು ಪದಾಧಿಕಾರಿಗಳ ವಿರೋಧದ ನಡುವೆಯೂ ಎಬಿವಿಎಂಎಸ್ ಸಿದ್ದರಾಮಯ್ಯನವರಿಗೆ ಸನ್ಮಾನ ಮಾಡುತ್ತಿರುವುದು ಖಂಡನಾರ್ಹ. ಮುಖ್ಯಮಂತ್ರಿ ಹುದ್ದೆಯು ಪಾವಿತ್ರ್ಯತೆ ಮತ್ತು ಗಂಭೀರತೆಯದ್ದಾಗಿದೆ. ಆದರೆ ಅದಕ್ಕೆ ಅವರು ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ  ಒಕ್ಕೂಟದ ಅಧ್ಯಕ್ಷ ಎಸ್.ಸಿ.ರಾಜೇಶ್, ಕೌಲಂದೆ ಸಿದ್ದಪ್ಪ, ಚಿಕ್ಕಮಾದಪ್ಪ, ನಟರಾಜ್ ಜಮೀನ್ದಾರ್ ಮಹೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: