ಮೈಸೂರು

ಯುವದಸರಾದಲ್ಲಿ ಗಾಯಕ ಟಿಪ್ಪು ಹಾಡಿನ ಮೋಡಿ

ಬಾಲಿವುಡ್‍yuvadasara-web-1ನ ಖ್ಯಾತ ಹಿನ್ನೆಲೆ ಗಾಯಕ ಟಿಪ್ಪು ಪ್ರಸ್ತು ಪಡಿಸಿದ ಕನ್ನಡದ ಟಪ್ಪಾಂಗುಚ್ಚಿ ಹಾಡುಗಳು ನೆರೆದಿದ್ದವರನ್ನು ಹೆಜ್ಜೆ ಹಾಕುವಂತೆ ಮಾಡಿತು.

ಮಹಾರಾಜ ಕಾಲೇಜು ಮೈದಾನದಲ್ಲಿ ಗುರುವಾರ ಯುವ ದಸರಾ ಕಾರ್ಯಕ್ರಮದಲ್ಲಿ ಯಶ್-ರಾಧಿಕಾ ಪಂಡಿತ್‍ ತಾರಾಗಣದ ‘ಮಿಸ್ಟರ್ ಆ್ಯಂಡ್ ಮಿಸೆಸ್ ರಾಮಾಚಾರಿ’ ಚಿತ್ರದ ಟೈಟಲ್ ಹಾಡಿನೊಂದಿಗೆ ವೇದಿಕೆಗೆ ಆಗಮಿಸಿದ ಟಿಪ್ಪು ಕನ್ನಡದ ಹಾಡುಗಳನ್ನು ಹಾಡಿ ಪ್ರೇಕ್ಷಕರನ್ನು ರಂಜಿಸಿದರು.

ಪುನಿತ್‍ ರಾಜ್‍ಕುಮಾರ್‍ ಅಭಿನಯದ ‘ರಾಜ್ ದಿ ಶೋ ಮ್ಯಾನ್’ ಚಿತ್ರದ ಹೇ ಪಾರೂ ಹೇ ಪಾರೂ’, ಜಾಕಿ ಚಿತ್ರದ ‘ಶಿವಾ ಅಂತ ಹೋಗುತ್ತಿದ್ದೆ’, ಗಜ ಕೇಸರಿ ಚಿತ್ರದ ‘ಇಷ್ಟು ದಿವಸ ಎಲ್ಲಿ ಇದ್ದೆ’, ಹೀಗೆ ಸಾಲು ಸಾಲಾಗಿ ಕನ್ನಡ ಹಾಡುಗಳನ್ನು ಹಾಡಿದರು.

ಗಾಯಕ ಟಿಪ್ಪು ಕನ್ನಡದಲ್ಲಿ ದಸರಾ ಹಬ್ಬದ ಶುಭಾಶಯ ಹೇಳುವ ಮೂಲಕ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡರು.

 

Leave a Reply

comments

Related Articles

error: