ಕ್ರೀಡೆಮೈಸೂರು

ಚಾಂಪಿಯನ್ ಆಗಿ ಹೊರಹೊಮ್ಮಿದ ಮೆಟ್ರೋ ಕಾರ್ಸ್

ಮೈಸೂರಿನ ಕಾಫಿ ಬೋರ್ಡ್ ಮೈದಾನದಲ್ಲಿ ಇತ್ತೀಚೆಗೆ ರೋಟರಿ ಸೆಂಟ್ರಲ್ ಮೈಸೂರು ಆಯೋಜಿಸಿದ ಪಂಚಶೀಲ ಕಪ್ ಕ್ರಿಕೆಟ್ ಪಂದ್ಯಾವಳಿ ಜರುಗಿತು.

ರೋಟರಿ ಜಿಲ್ಲಾ ಅಸಿಸ್ಟೆಂಟ್ ಗವರ್ನರ್ ಅನಂತರಾಜ ಅರಸ್ ಪಂದ್ಯಾವಳಿಯ ಉದ್ಘಾಟನೆಯನ್ನು ನೆರವೇರಿಸಿದರು. ರೋಟರಿ ಸೆಂಟ್ರಲ್ ಅಧ್ಯಕ್ಷ ಎಸ್.ಆರ್.ಸ್ವಾಮಿ, ಕಾರ್ಯದರ್ಶಿ ಕೆ.ಎಸ್.ಬಾಲಾಜಿ, ರೋಟರಿ ಸೆಂಟ್ರಲ್ ಅಸೋಸಿಯೇಶನ್ ಅಧ್ಯಕ್ಷ ರಾಜೇಂದ್ರ ಹುಬ್ಳಿ, ಮತ್ತು ರೋಟರಿ ಸೆಂಟ್ರಲ್ ಮೈಸೂರು ಇದರ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.

ಹೆಚ್ ಡಿಬಿ ಫೈನಾನ್ಸ್, ಎಕ್ಸಿಸ್ ಬ್ಯಾಂಕ್, ಐಡಿಬಿಐ ಬ್ಯಾಂಕ್, ವ್ಹೀಲ್ &ಎಕ್ಸೆಲ್ಸ್, ಎಂಟಿಸಿ, ಗ್ಲಾಡೆಸ್, ಪೌಲ್ಟ್ರಿ ಫಾರ್ಮ್ ಅಸೋಸಿಯೇಶನ್, ರೌಂಡ್ ಟೇಬಲ್ ಆಫ್ ಮೈಸೂರು, ಮೆಟ್ರೋ ಕಾರ್ಸ್, ಆರ್ ಒಸಿಇಎಂ, ಐಎಫ್ ಸಿಆರ್ ಹಾಸನ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು.

ಫೈನಲ್ ಪಂದ್ಯವು ಪೌಲ್ಟ್ರಿ ಫಾರ್ಮ್ ಅಸೋಸಿಯೇಶನ್ ಮತ್ತು ಮೆಟ್ರೊ ಕಾರ್ಸ್ ತಂಡಗಳ ನಡುವೆ ನಡೆದಿದ್ದು, ಮೆಟ್ರೋ ಕಾರ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಸಮಾರೋಪ ಸಮಾರಂಭವು ಕಾಫಿ ಬೋರ್ಡ್ ಮೈದಾನದಲ್ಲಿ 3181 ರೋಟರಿ ಜಿಲ್ಲಾ ಗವರ್ನರ್ ಡಾ.ನಾಗಾರ್ಜುನ್, ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಕೃಷ್ಣಯ್ಯ ಮತ್ತಿತರರು ಉಪಸ್ಥಿರಿದ್ದರು.

Leave a Reply

comments

Related Articles

error: