ಪ್ರಮುಖ ಸುದ್ದಿವಿದೇಶ

ಬಾಂಗ್ಲಾದೇಶದಲ್ಲಿ ಮಳೆಯ ಅಬ್ಬರ : 144 ಜನರ ಮರಣ

ಢಾಕಾ, ಜೂನ್ 14 : ಬಾಂಗ್ಲಾದೇಶದಲ್ಲಿ ಮಳೆಯ ರೌದ್ರಾವತಾರಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ಭಾರೀ ವರ್ಷಧಾರೆ ಹಾಗೂ ಭೂಕುಸಿತಕ್ಕೆ 144 ಜನರು ಬಲಿಯಾಗಿದ್ದಾರೆ. ಭಾರತದ ಗಡಿಯಲ್ಲಿರುವ ಹಳ್ಳಿಗಳಂತೂ ಅಕ್ಷರಶಃ ನೀರುಪಾಲಾಗಿವೆ.

ಮಳೆಯ ಅಬ್ಬರಕ್ಕೆ ಚಿತ್ತಗಾಂಗ್, ಬಂದಾರ್ಬನ್ ಹಾಗೂ ರಂಗಮತಿ ಜಿಲ್ಲೆಗಳಲ್ಲಿ ಹೆಚ್ಚಿನ ಹಾನಿ ಸಂಭವಿಸಿದೆ. ಹಲವು ಕಡೆಗಳಲ್ಲಿ ಭಾರೀ ಭೂಕುಸಿತದಿಂದಾಗಿ ಮೃತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ನೂರಾರು ಜನ ನಾಪತ್ತೆ ಆಗಿದ್ದಾರೆ.

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಬಾಂಗ್ಲಾದೇಶದಲ್ಲಿ 3 ದಿನಗಳ ಕಾಲ ಧಾರಾಕಾರ ಮಳೆಯಾಗಿದೆ. ಭೂಕುಸಿತ ಹಾಗೂ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಂದ ನಾಲ್ಕ ಸಾವಿರ ಜನರನ್ನು ರಕ್ಷಣೆ ಮಾಡಲಾಗಿದೆ. ಸರ್ಕಾರ 18 ಗಂಜಿ ಕೇಂದ್ರಗಳನ್ನು ತೆರೆದಿದೆ. ರಂಗಮತಿ ಜಿಲ್ಲೆಯೊಂದರಲ್ಲೇ ಭೂಕುಸಿತದಿಂದ 99 ಮಂದಿ ಮೃತಪಟ್ಟಿದ್ದಾರೆ.

ರಕ್ಷಣಾ ಕಾರ್ಯಾಚರಣೆಗೆ ತೆರಳಿದ್ದ ನಾಲ್ವರು ಸೇನಾಧಿಕಾರಿಗಳು ಕೂಡ ಸಾವನ್ನಪ್ಪಿದ್ದು, ಒಬ್ಬ ಯೋಧನೂ ನಾಪತ್ತೆಯಾಗಿದ್ದಾನೆ. ಭಾರೀ ಮಳೆಯಿಂದಾಗಿ ಬಹುತೆಕ ನೆಲದಲ್ಲಿ ಕಡೆ ಹೂಳು ತುಂಬಿಕೊಂಡಿದೆ. ಇದರಿಂದ ಪ್ರಾಣಿ ಪಕ್ಷಿಗಳೂ ಹೊರಬರಲಾಗದೆ ಅವಶೇಷಗಳ ಅಡಿಯಲ್ಲಿ ಸಿಕ್ಕಿ ಜೀವಬಿಟ್ಟಿವೆ.

-ಎನ್.ಬಿ.ಎನ್.

Leave a Reply

comments

Related Articles

error: