ಕರ್ನಾಟಕಮೈಸೂರು

ಪಂಚಕರ್ಮ ಆಸ್ಪತ್ರೆ ಉದ್ಘಾಟಿಸಿದ ಸಿಎಂ

ಮೈಸೂರಿನ ಕೆ.ಆರ್.ಎಸ್.ರಸ್ತೆಯಲ್ಲಿರುವ ಬೃಂದಾವನ ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸಲಾದ ಪಂಚಕರ್ಮ ಆಯುರ್ವೇದ ಆಸ್ಪತ್ರೆ ಕಟ್ಟಡ , ಆಯುಷ್ ಇಲಾಖೆಯ ಸರ್ಕಾರಿ ಪ್ರಕೃತಿ ಮತ್ತ ಯೋಗ ವೈದ್ಯಕೀಯ ಮಹಾವಿದ್ಯಾಲಯ ಬೋಧನಾ ಆಸ್ಪತ್ರೆ ಕಟ್ಟಡವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಉದ್ಘಾಟಿಸಿದರು.

ಉದ್ಘಾಟನೆಯ ಬಳಿಕ ಮಾತನಾಡಿದ ಸಿಎಂ ಆಯುರ್ವೇದದ ಔಷಧಿಯಿಂದ ರೋಗಗಳು ನಿಯಂತ್ರಣಕ್ಕೆ ಬರಲಿದೆ. ಪ್ರಕೃತಿ ಚಿಕಿತ್ಸೆಯಿಂದ ಮಧುಮೇಹ ಎರಡು ದಿನಗಳಲ್ಲಿ ಯಾವ ರೀತಿ ನಿಯಂತ್ರಣಕ್ಕೆ ಬಂತು ಎಂಬುದನ್ನು ತಿಳಿಸಿದರು.

ಕಾವೇರಿ ವಿವಾದದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಸರಳ ಹಾಗೂ ಸಾಂಪ್ರದಾಯಿಕ ದಸರಾ ಆಚರಿಸಲಾಗುತ್ತಿದೆ. ರಾಜ್ಯದ ಎಲ್ಲ ಕಡೆಯೂ ಬಹುತೇಕ ಬರಗಾಲ ಪರಿಸ್ಥಿತಿ ಇದೆ. 250ಟಿಎಂಸಿ ನೀರು ಸಂಗ್ರಹವಾಗುತ್ತಿತ್ತು. ಆದರೆ ಈ ಬಾರಿ ಕೇವಲ 129 ಟಿಎಂಸಿ ನೀರು ಸಂಗ್ರಹವಾಗಿದೆ. ಕಾವೇರಿ ತೀರ್ಪು ರಾಜ್ಯಕ್ಕೆ ವಿರುದ್ಧವಾಗಿದೆ. ವಾಸ್ತವಾಂಶವನ್ನು ಕಲೆ ಹಾಕಲು ಕೇಂದ್ರ ಸರ್ಕಾರ ತಜ್ಞರ ಸಮಿತಿಯನ್ನು ಕಳುಹಿಸಿದೆ ಎಂದರು.

ನೂತನ ಕಟ್ಟಡವನ್ನು ವೀಕ್ಷಿಸಿದ ಸಿಎಂ ಥ್ರೆಡ್ ವ್ಹೀಲ್ ನಲ್ಲಿ ವ್ಯಾಯಾಮವನ್ನು ಮಾಡಿದರಲ್ಲದೇ ಉಪಕರಣದ ಕುರಿತು ಮಾಹಿತಿಯನ್ನು ಪಡೆದರು.  ಈ ಸಂದರ್ಭ ತೋಟಗಾರಿಕಾ ಸಚಿವ ಮಲ್ಲಿಕಾರ್ಜುನ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಚಾಮರಾಜ ಜಿಲ್ಲಾ ಉಸ್ತುವಾರಿ ಸಚಿವ ಮಹದೇವ ಪ್ರಸಾದ್, ಶಾಸಕ ವಾಸು ಮತ್ತಿತರರು ಸಿಎಂ ಜೊತೆಗಿದ್ದರು. ಪಂಚಕರ್ಮ ಆಸ್ಪತ್ರೆಯು 9ಕೋಟಿ 14ಲಕ್ಷರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು, 100ಹಾಸಿಗೆಗಳನ್ನೊಳಗೊಂಡಿದೆ. ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕ ಚಿಕಿತ್ಸಾ ಸೌಲಭ್ಯವನ್ನು ಒದಗಿಸಲಾಗಿದೆ. ಅತ್ಯಾಧುನಿಕ ಪಂಚಕರ್ಮ ಆಸ್ಪತ್ರೆಯು ಮೂಳೆ ಮತ್ತು  ನರರೋಗಿ ಸಂಬಂಧಿ ಕಾಯಿಲೆಗಳಿಗೆ, ಚರ್ಮದ ಕಾಯಿಲೆ ಸೇರಿದಂತೆ ಇನ್ನಿತರ ಕಾಯಿಲೆಗಳಿಗೆ ಉತ್ತಮ ಚಿಕಿತ್ಸೆ ನೀಡಲಿದೆ.

 

 

Leave a Reply

comments

Related Articles

error: