ಮೈಸೂರು

ಸಾವಯವ ಕೃಷಿ ಪದ್ದತಿಯಿಂದ ಪ್ರಗತಿ ಸಾಧ್ಯ: ರೈತ ಮಹಿಳೆ ಪದ್ಮಮ್ಮ

ಮೈಸೂರು,(ಪಿರಿಯಾಪಟ್ಟಣ),ಜೂ.14-ರೈತರು ಸರ್ಕಾರ ಸಾಲ ಮನ್ನಾ ಮಾಡಿಲಿ ಎಂದು ಗೋಳಿಡುವ ಬದಲು ಕಡಿಮೆ ಖರ್ಚಿನಲ್ಲಿ ಅಧಿಕ ಆದಾಯ ಪಡೆಯುವ ಸಾವಯವ ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಪ್ರಗತಿಪರ ರೈತ ಮಹಿಳೆ ಪದ್ಮಮ್ಮ ಹೇಳಿದರು.

ತಾಲೂಕಿನ ಹಾರನಹಳ್ಳಿ ಗ್ರಾಮದಲ್ಲಿ ಬುಧವಾರ ಏರ್ಪಡಿಸಿದ್ದ ಹೋಬಳಿ ಮಟ್ಟದ ಕೃಷಿ ಅಭಿಯಾನ ಇಲಾಖೆಗಳ ನಡಿಗೆ ರೈತರ ಬಾಗಿಲಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರೈತನ ಬದುಕಿಗೆ ಕೃಷಿಯೇ ಆಧಾರವಾಗಿದ್ದು, ಅಧಿಕಾರಿಗಳು ಸರ್ಕಾರದ ಯೋಜನೆಗಳನ್ನು ರೈತರಿಗೆ  ತಲುಪಿಸುವ ಕೆಲಸವನ್ನು ಸಕಾಲದಲ್ಲಿ ಮಾಡಬೇಕು, ರೈತರನ್ನು ವಿನಾ ಕಾರಣ ಅಲೆದಾಡಿಸುವ ಬದಲು ಅವರಿಗೆ ಅಗತ್ಯವಾದ ಮಾಹಿತಿಯನ್ನು ಸಮಯಕ್ಕೆ ಸರಿಯಾಗಿ ನೀಡಬೇಕು ಎಂದರು.

ರೈತರ ಬಗ್ಗೆ ಸರ್ಕಾರಗಳು ತಾಳುತ್ತಿರುವ ನಿರ್ಲಕ್ಷ್ಯವನ್ನು ನಾವೆಲ್ಲರೂ ಕಂಡಿದ್ದೇವೆ. ರೈತ ಎಂದರೆ ಅನ್ನದಾತ ಅವನಿಗೆ ಕೊಟ್ಟು ಅಭ್ಯಾಸವೇ ಹೊರತು ಇನ್ನೊಬ್ಬರಲ್ಲಿ ಕೈಚಾಚಿ ಅಭ್ಯಾಸವಿಲ್ಲ ಆದ್ದರಿಂದ ರೈತರು ಸರ್ಕಾರಗಳ ಮುಂದೆ ಸಾಲ ಮನ್ನಾ ಮಾಡಿ ಎಂದು ಅಂಗಲಾಚುವುದನ್ನು ಬಿಟ್ಟು ಸಾವಯವ ಕೃಷಿ ಪದ್ಧತಿಯಲ್ಲಿ ತೊಡಗಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಜಿಪಂ ಸದಸ್ಯೆ ರುದ್ರಮ್ಮನಾಗಯ್ಯ, ತಾಪಂ ಸದಸ್ಯೆ ಸುಮಿತ್ರ ನಾಗರಾಜು, ಗ್ರಾಪಂ ಅಧ್ಯಕ್ಷ ರಾಣಿಲಕ್ಷ್ಮಣ, ಜ್ಯೋತಿಕುಮಾರ್, ಉಪಾಧ್ಯಕ್ಷೆ ಯಶೋಧಮ್ಮ ಯೋಗೀಶ್, ಸದಸ್ಯರಾದ ಪುಷ್ಪಲತಾ, ಪುಟ್ಟಸ್ವಾಮಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪಿ.ಶಿವರಾಮೇಗೌಡ, ಕೃಷಿ ಅಧಿಕಾರಿಗಳಾದ ಸಂದೀಪ್, ಮಹೇಶ್, ಡಿ.ಎಂ.ನಾಗರಾಜು, ಹೆಚ್.ಎನ್.ರಾಮಕೃಷ್ಣ, ಹೆಚ್.ಆರ್.ಶಿವಣ್ಣ, ಕೀರ್ತಿಕುಮಾರ್, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೆಶಕ ಡಾ.ಸುದರ್ಶನ್,   ಪಶು ವೈದ್ಯ ಡಾ.ಸುರೇಶ್ ಭಜಂತ್ರಿ, ನಿವೃತ್ತ ಕೃಷಿ ಇಲಾಖೆ ಸಹಾಯಕ ನಿರ್ದೆಶಕ ಶ್ರೀನಿವಾಸ ಶೆಟ್ಟಿ ಇತರರು ಹಾಜರಿದ್ದರು. (ವರದಿ-ಎಂ.ಎನ್)

Leave a Reply

comments

Related Articles

error: