ಮೈಸೂರು

ಕೇಂದ್ರದ ತಜ್ಞರ ತಂಡದಿಂದ ಕಾವೇರಿ ಕೊಳ್ಳದ ವಾಸ್ತವ ಸ್ಥಿತಿ ಅಧ್ಯಯನ ಆರಂಭ

ಕೇಂದ್ರ ಜಲ ಆಯೋಗದ ಅಧ್ಯಕ್ಷ ಜಿ.ಎಸ್.ಝಾ ನೇತೃತ್ವದ ತಜ್ಞರ ತಂಡವು ಕಾವೇರಿ ಕೊಳ್ಳದ ಪ್ರದೇಶಗಳ ಪರಿಶೀಲನೆಗೆ ರಾಜ್ಯಕ್ಕೆ ಆಗಮಿಸಿದ್ದು, ಮದ್ದೂರಿನ ವಿವಿಧೆಡೆಗಳಿಂದ ಪರಿಶೀಲನೆ ಆರಂಭಿಸಿದ್ದಾರೆ.

ನಿನ್ನೆ ಬೆಂಗಳೂರಿಗೆ ಆಗಮಿಸಿದ್ದ ತಂಡವು ಇಂದು ಬೆಳಗ್ಗೆ ವಿಧಾನಸೌಧದಲ್ಲಿ ಸಭೆ ನಡೆಸಿತ್ತು. ಮದ್ದೂರಿನಿಂದ ನೀರಿನ ಮೂಲಗಳ ಪರಿಶೀಲನೆ ಆರಂಭಿಸಿರುವ ತಜ್ಞರ ತಂಡವು ಸಂಜೆ 6 ಗಂಟೆಗೆ ಹೆಲಿಕಾಪ್ಟರ್ ಮೂಲಕ ಕೆಆರ್‍ಎಸ್ ಜಲಾಶಯಕ್ಕೆ ಆಗಮಿಸಲಿದೆ. ಕರ್ನಾಟಕದಲ್ಲಿರುವ ಕಾವೇರಿ ಕಣಿವೆಯ ಪ್ರಮುಖ ಜಲಾಶಯಗಳಾದ ಹೇಮಾವತಿ, ಕಬಿನಿ, ಕೆಆರ್‍ಎಸ್, ಹಾರಂಗಿಗೆ ಭೇಟಿ ನೀಡಿ ನೀರಿನ ಸಂಗ್ರಹವನ್ನು ಪರಿಶೀಲಿಸಲಿದೆ.

ಕೇಂದ್ರ ಜಲ ಆಯೋಗದ ಸದಸ್ಯ ಸೈಯದ್ ಮಸೂದ್ ಹುಸೇನ್, ಕೃಷ್ಣಾ, ಗೋದಾವರಿ ಜಲ ಸಂಪನ್ಮೂಲ ಆಯೋಗದ ಮುಖ್ಯ ಅಭಿಯಂತರ ಆರ್.ಕೆ. ಗುಪ್ತಾ, ಕಾವೇರಿ ಕಣಿವೆಯ ನಾಲ್ಕೂ ರಾಜ್ಯಗಳ ಮುಖ್ಯ ಇಂಜಿನಿಯರ್‍ ಗಳು ತಜ್ಞರ ತಂಡದಲ್ಲಿದ್ದಾರೆ.

ಈ ತಂಡವು ಕಾವೇರಿ ಜಲ ವಿವಾದಕ್ಕೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್ ಆದೇಶದಂತೆ ಕಾವೇರಿ ಕೊಳ್ಳದ ಪ್ರದೇಶಗಳ ವಾಸ್ತವ ಸ್ಥಿತಿಯನ್ನು ಅಧ್ಯಯನ ಮಾಡಿ ಅ.17ರಂದು ಸುಪ್ರೀಂ ಕೋರ್ಟ್‍ಗೆ ವರದಿ ಸಲ್ಲಿಸಲಿದೆ. ಅ.18ರಂದು ಮುಂದಿನ ವಿಚಾರಣೆ ನಡೆಯಲಿದೆ.

Leave a Reply

comments

Related Articles

error: