ಸುದ್ದಿ ಸಂಕ್ಷಿಪ್ತ

ಲೋಕಾಯುಕ್ತರಿಂದ ಅಹವಾಲು ಸ್ವೀಕಾರ 

ಮೈಸೂರು,ಜೂ.14- ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳಿಂದ ಮೈಸೂರು ಜಿಲ್ಲೆಯಲ್ಲಿ  ಜೂ.19 ರಿಂದ 29 ರವರೆಗೆ ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ತಾಲ್ಲೂಕು ಕೇಂದ್ರಗಳಲ್ಲಿ  ಸಾರ್ವಜನಿಕರಿಂದ ದೂರು/ ಅಹವಾಲು ಸ್ವೀಕರಿಸಲಾಗುವುದು ಎಂದು ಕರ್ನಾಟಕ ಲೋಕಾಯುಕ್ತ ಪೊಲೀಸ್ ವಿಭಾಗದ ಪೊಲೀಸ್ ಅಧೀಕ್ಷೆ ಜೆ.ಕೆ. ರಶ್ಮಿ ಅವರು ತಿಳಿಸಿದ್ದಾರೆ.
ಜೂ.19 ರಂದು ಮೈಸೂರು ನಗರದ ಜೆ.ಎಲ್.ಬಿ. ರಸ್ತೆಯಲ್ಲಿರುವ ಚಾಮುಂಡಿ ಅತಿಥಿಗೃಹ, ಜೂ.20 ರಂದು ತಾಲೂಕು ಕಚೇರಿ ಆವರಣ ಮೈಸೂರು, ಜೂ. 21 ರಂದು ತಾಲ್ಲೂಕು ಕಚೇರಿ ಆವರಣ, ತಿ.ನರಸೀಪುರ ಜೂ.22 ರಂದು ಪಿಡಬ್ಲ್ಯೂಡಿ ಅತಿಥಿ ಗೃಹ ಎಚ್.ಡಿ.ಕೋಟೆ, ಜೂ.23 ರಂದು ಪಿಡಬ್ಲ್ಯೂಡಿ ಅತಿಥಿ ಗೃಹ ಪಿರಿಯಾಪಟ್ಟಣ, ಜೂ. 27 ರಂದು ಪಿಡಬ್ಲ್ಯೂಡಿ ಅತಿಥಿ ಗೃಹ ಹುಣಸೂರು,  ಜೂ. 28 ರಂದು ತಾಲ್ಲೂಕು ಕಚೇರಿ ಆವರಣ ನಂಜನಗೂಡು ಹಾಗೂ ಜೂ.29 ರಂದು   ಪಿಡಬ್ಲ್ಯೂಡಿ ಅತಿಥಿ ಗೃಹ ಕೆ.ಆರ್.ನಗರ ತಾಲ್ಲೂಕಿನಲ್ಲಿ ನಡೆಯಲಿದೆ.

ಸರ್ಕಾರಿ ಕಚೇರಿಗಳಲ್ಲಿ ಅಧಿಕೃತ ಕೆಲಸಗಳಿಗಾಗಿ ವಿಳಂಬ, ಲಂಚದ ಬೇಡಿಕೆ ಹಾಗೂ ಇನ್ನಿತರೆ ತೊಂದರೆ ನೀಡುವ ಸರ್ಕಾರಿ ಅಧಿಕಾರಿ ನೌಕರರ ವಿರುದ್ಧ ಸಾರ್ವಜನಿಕರು ನಿಗದಿತ ಪ್ರಪತ್ರದಲ್ಲಿ ದೂರು ನೀಡಬಹುದಾಗಿದೆ. ಹೆಚ್ಚಿನ ಮಾಹಿತಿಗೆ ದೂ.ಸಂ. 0821-2521100  ಸಂಪರ್ಕಿಸಬಹುದು. (ವರದಿ-ಎಂ.ಎನ್)

Leave a Reply

comments

Related Articles

error: