ಪ್ರಮುಖ ಸುದ್ದಿಮೈಸೂರು

ಹವಾಮಾನ ಆಧರಿತ ಬೆಳೆ ವಿಮೆ : ಕಂತು ಪಾವತಿಸಲು ಮಂಡ್ಯ ರೈತರಿಗೆ ಮನವಿ

ಮಂಡ್ಯ, ಜೂ.14 : ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯನ್ನು ಅನುಮೋದಿಸಿದ್ದು, ರೈತರಿಗೆ ಹವಮಾನ ವೈಪರೀತ್ಯದಿಂದ ಬೆಳೆ ನಷ್ಟವಾದಲ್ಲಿ ನಷ್ಟ ಅನುಭವಿಸಿದ ರೈತರಿಗೆ ಸೂಕ್ತ ಪರಿಹಾರವನ್ನು ನೀಡುವ ಉದ್ದೇಶದಿಂದ “ಮರುವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ”ಯನ್ನು 2017 – ಪ್ರಸಕ್ತ ಮುಂಗಾರು ಹಂಗಾಮಿಗೆ ಕರ್ನಾಟಕ ರಾಜ್ಯದಲ್ಲಿ ಅನುಷ್ಟಾನಗೊಳಿಸಲಾಗುತ್ತಿದೆ.

ನೈಜವಾಗಿ ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ತಲುಪಿಸಬೇಕೆಂಬ ಕಾರಣದಿಂದ ಹಲವು ಮಾರ್ಪಡುಗಳೊಂದಿಗೆ ಈ ಬಾರಿ ಈ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ.

ಪ್ರಸಕ್ತ ಸಾಲಿನಲ್ಲಿ ಮಂಡ್ಯ ಜಿಲ್ಲೆಯಲ್ಲಿ ಮಾವು ಬೆಳೆಯನ್ನು ಕೆ.ಆರ್.ಪೇಟೆ ತಾಲ್ಲೂಕಿನ ಅಕ್ಕಿಹೆಬ್ಬಾಳು, ಬೂಕನಕೆರೆ, ಶೀಳನೆರೆ, ಕಿಕ್ಕೇರಿ, ಸಂತೆಬಾಚಹಳ್ಳಿ, ಕಸಬಾ ಹೋಬಳಿಗಳನ್ನು, ಮದ್ದೂರು ತಾಲ್ಲೂಕಿನ ಆತಗೂರು, ಕಸಬಾ ಹೋಬಳಿಗಳನ್ನು, ಮಳವಳ್ಳಿ ತಾಲ್ಲೂಕಿನ ಬಿ.ಜಿ.ಪುರ, ಹಲಗೂರು, ಕಿರುಗಾವಲು, ಕಸಬಾ ಹೋಬಳಿಗಳನ್ನು, ಮಂಡ್ಯ ತಾಲ್ಲೂಕಿನ ಕೆರೆಗೋಡು, ದುದ್ದ, ಕೊತ್ತತ್ತಿ, ಕಸಬಾ ಹೋಬಳಿಗಳನ್ನು, ನಾಗಮಂಗಲ ತಾಲ್ಲೂಕಿನ  ಬಿಂಡಿಗನವಿಲೆ, ದೇವಲಾಪುರ, ಕಸಬಾ ಹೋಬಳಿಗಳನ್ನು, ಪಾಂಡವಪುರ ತಾಲ್ಲೂಕಿನ ಮೇಲುಕೋಟೆ, ಚಿನಕುರಳಿ, ಕಸಬಾ ಹೋಬಳಿಗಳನ್ನು, ಶ್ರೀರಂಗಪಟ್ಟಣ ತಾಲ್ಲೂಕಿನ ಕೆ. ಶೆಟ್ಟಹಳ್ಳಿ, ಬೆಳಗೊಳ, ಕಸಬಾ, ಅರಕೆರೆ ಹೋಬಳಿಗಳನ್ನು ವಿಮಾ ವ್ಯಾಪ್ತಿಗೆ ಒಳಪಡಿಸಗಿದೆ.

ಪ್ರಸಕ್ತ 2017 ಮುಂಗಾರು ಹಂಗಾಮಿನ ಯೋಜನೆಯ ಅನುಷ್ಠಾನಕ್ಕೆ ಯೋಜನೆವಾರು, ಬೆಳೆವಾರು ರೈತರ ವಿವರಗಳನ್ನು ಆನ್‍ಲೈನ್ ಪೋರ್ಟಲ್ Samrakshane.nic.in ಮೂಲಕ ನೋಂದಾಯಿಸಲಾಗುತ್ತದೆ.

ವಿಮಾ ಯೋಜನೆಯಡಿ ನೊಂದಣಿಯಾದ ರೈತರಿಗೆ ಪ್ರತಿ ಹಂತದಲ್ಲೂ ಎಸ್.ಎಂ.ಎಸ್. ಮೂಲಕ ಮಾಹಿತಿ ನೀಡಲಾಗುವುದು. ವಿಮಾ ಯೋಜನೆಯಡಿ ನೊಂದಣಿಯಾದ ರೈತರಿಗೆ ನಷ್ಟವಾದ ಸಂದರ್ಭದಲ್ಲಿ ಪರಿಹಾರವನ್ನು ಆನ್‍ಲೈನ್ ಮೂಲಕ ನೇರವಾಗಿ ರೈತರ ಖಾತೆಗೆ ಜಮೆ ಮಾಡಲಾಗುವುದು. ಈ ಯೋಜನೆಯಲ್ಲಿ ಒಳಪಡಿಸಲಾಗುವ ಎಲ್ಲಾ ಬೆಳೆಗಳಿಗೆ ಬೆಳೆ ಸಾಲ ಪಡೆಯುವ ರೈತರನ್ನು ಕಡ್ಡಾಯವಾಗಿ ವಿಮೆಗೆ ಒಳಪಡಿಸಲಾಗುತ್ತದೆ. ಉಳಿದ ರೈತರು ಸ್ವ ಇಚ್ಛೆಯಿಂದ ಈ ಯೋಜನೆಯಡಿ ನೋಂದಾಯಿಸಿಕೊಳ್ಳಬಹುದಾಗಿರುತ್ತದೆ.

ಬೆಳೆ ಸಾಲ ಪಡೆಯದ ರೈತರು ಅರ್ಜಿಯೊಂದಿಗೆ ಭೂಮಿ ಹೊಂದಿರುವುದಕ್ಕೆ ದಾಖಲೆಗಳಾದ ಪಹಣಿ/ಖಾತೆ ಪಾಸ್ ಬುಕ್/ಕಂದಾಯ ರಸೀದಿ/ಆಧಾರ್ ಕಾರ್ಡಾ ಮತ್ತು ಸ್ವಯಂ ಘೋಷಿತ ಪತ್ರವನ್ನು ನೀಡತಕ್ಕದು. ಈ ಬಗ್ಗೆ ಅರ್ಜಿಪಡೆಯಲು ಹಾಗೂ ಹೆಚ್ಚಿನ ವಿವರಗಳಿಗೆ ಸಮೀಪದ ರಾಷ್ಟ್ರೀಕೃತ ವಾಣಿಜ್ಯ ಬ್ಯಾಂಕ್/ಗ್ರಾಮೀಣಾ ಬ್ಯಾಂಕ್ ಆಥವಾ ಪ್ರಾಥಮಿಕ ಕೃಷಿ ಸಹಕಾರ ಸಂಘಗಳನ್ನು ಸಂಪರ್ಕಿಸಬೇಕು.

ಮಂಡ್ಯ ಜಿಲ್ಲೆಗೆ SBI GIC Ltd. ವಿಮಾ ಸಂಸ್ಥೆಯಾಗಿ ಕಾರ್ಯನಿರ್ವಹಣೆ ಮಾಡಲಿದೆ. ಮಾವು ಬೆಳೆಗೆ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಅಧಿಸೂಚನೆ ಹೊರಡಿಸಲಾಗಿದ್ದು ಆಸಕ್ತ ರೈತರು ಬೆಳೆಗೆ ವಿಮಾ ಕಂತನ್ನು ಪಾವತಿಸಬಹುದಾಗಿರುತ್ತದೆ.

ಮುಂಗಾರು ಹಂಗಾಮಿನಲ್ಲಿ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಡಿ ಬೆಳೆ ಸಾಲ ಪಡೆದಿರುವ ಹಾಗೂ ಬೆಳೆ ಸಾಲ ಪಡೆಯದಿರುವ ರೈತರಿಗೆ ವಿಮಾ ಕಂತನ್ನು ಪಾವತಿಸಲು ಜೂನ್ 30 ಕೊನೆಯ ದಿನ.

-ಎನ್.ಬಿ.ಎನ್.

Leave a Reply

comments

Related Articles

error: