ಮೈಸೂರು

ಕರಾಟೆ ಪ್ರಯುಕ್ತ ಪಥ ಸಂಚಲನ

ದಸರಾ ಉತ್ಸವ ಪ್ರಯುಕ್ತ ಮೈಸೂರು ಕರಾಟೆ ಅಸೋಸಿಯೇಶನ್ ವತಿಯಿಂದ 10ನೇ ರಾಜ್ಯ ಮಟ್ಟದ ದಸರಾ ಕರಾಟೆ ಪಂದ್ಯಾವಳಿಯನ್ನು ಅಕ್ಟೋಬರ್ 8ರಂದು ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಈ ಪ್ರಯುಕ್ತ ಶುಕ್ರವಾರ  ಬೆಳಿಗ್ಗೆ 8.30ಕ್ಕೆ ಮೈಸೂರು ಅರಮನೆ ಮುಂಭಾಗ ಕರಾಟೆ ಪಟುಗಳು ಕರಾಟೆ ಪ್ರದರ್ಶಿಸಿದರು. ಬಳಿಕ  ಅಂಜನೇಯ ದೇವಸ್ಥಾನದಿಂದ ಹೊರಟು ಆರ್.ಗೇಟ್ ಮೂಲಕ ನಿಂಬುಜಾ ದೇವಿ ದೇವಸ್ಥಾನದವರೆಗೆ ಕರಾಟೆ ಪಟುಗಳು ಪಥ ಸಂಚಲನ ನಡೆಸಿದರು.

ಪಥಸಂಚಲನದಲ್ಲಿ ನೀರು ಉಳಿಸಿ, ಮರ ಉಳಿಸಿ, ದೇಶ ಉಳಿಸಿ ಎಂಬ  ಬರಹಗಳಿರುವ ಫಲಕಗಳನ್ನು ಹಿಡಿದು ಸಾಗುತ್ತಿರುವುದು ಕಂಡು ಬಂತು.

Leave a Reply

comments

Related Articles

error: