ಪ್ರಮುಖ ಸುದ್ದಿಮೈಸೂರು

ಕೊಡಗಿನಲ್ಲಿ ಕಳೆದ ವರ್ಷಕ್ಕಿಂತ ಹೆಚ್ಚಿನ ಮಳೆ ; 2811 ಅಡಿಗೇರಿದ ಹಾರಂಗಿ ನೀರು

ಮಡಿಕೇರಿ, ಜೂ.13 : ಕೊಡಗು ಜಿಲ್ಲೆಯಲ್ಲಿ ಇಂದಿಗೆ ಸರಾಸರಿ ಮಳೆ 23.48 ಮಿಲಿ ಮೀಟರ್‍ನಷ್ಟು ಬಿದ್ದಿದೆ. ಕಳೆದ ವರ್ಷ ಇದೇ ದಿನದ ಸರಾಸರಿ 8.8 ಮಿ.ಮೀ.ನಷ್ಟಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಉತ್ತಮ ಮಳೆಯಾಗಿದ್ದು, ಹಾರಂಗಿ ಜಲಾಶಯದಲ್ಲೂ ನೀರಿನ ಮಟ್ಟ ಏರಿಕೆಯಾಗಿದೆ.

ಜನವರಿಯಿಂದ ಇಲ್ಲಿಯವರೆಗಿನ ಮಳೆ 453.74 ಮಿ.ಮೀ.ನಷ್ಟು ಬಿದ್ದುದೆ. ಕಳೆದ ವರ್ಷ ಈ ಅವಧಿಯಲ್ಲಿ ಅವಧಿಯಲ್ಲಿ 285.55 ಮಿ.ಮೀ ಮಳೆಯಾಗಿತ್ತು. ಮಡಿಕೇರಿ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 29.1 ಮಿ.ಮೀ ನಷ್ಟಿದೆ. ಕಳೆದ ವರ್ಷ ಇದೇ ದಿನ 14.95 ಮಿ.ಮೀ.ನಷ್ಟಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 554.95 ಮಿ. ಮೀ. ಬಿದ್ದಿದ್ದು, ಕಳೆದ ವರ್ಷ ಈ ಅವಧಿಯಲ್ಲಿ 420.83 ಮಿ.ಮೀ. ಮಳೆಯಾಗಿತ್ತು.

ವಿರಾಜಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 19.8 ಮಿ.ಮೀ.ನಷ್ಟಿದೆ. ಕಳೆದ ವರ್ಷ ಇದೇ ದಿನ 9.53 ಮಿ.ಮೀ.ನಷ್ಟು ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 418.18 ಮಿ.ಮೀ. ನಷ್ಟು ಬಿದ್ದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 234.89 ಮಿ.ಮೀ. ಮಳೆಯಾಗಿತ್ತು.

ಸೋಮವಾರಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 21.53 ಮಿ.ಮೀ.ನಷ್ಟಿದೆ. ಕಳೆದ ವರ್ಷ ಇದೇ ದಿನ 1.93 ಮಿ.ಮೀ.ನಷ್ಟು ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 366.79 ಮಿ.ಮೀ.ನಷ್ಟಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 200.93 ಮಿ.ಮೀ. ಮಳೆಯಾಗಿತ್ತು.

ಜಿಲ್ಲೆಯಲ್ಲಿ ಹೋಬಳಿವಾರು ದಾಖಲಾಗಿರುವ ಮಳೆ ವಿವರ:

ಮಡಿಕೇರಿ ಕಸಬಾ 28.6, ನಾಪೋಕ್ಲು 22, ಸಂಪಾಜೆ 23.8, ಭಾಗಮಂಡಲ 42, ವಿರಾಜಪೇಟೆ ಕಸಬಾ 10, ಹುದಿಕೇರಿ 22.9, ಶ್ರೀಮಂಗಲ 33.4, ಪೊನ್ನಂಪೇಟೆ 24.5, ಅಮ್ಮತ್ತಿ 9, ಬಾಳೆಲೆ 19, ಸೋಮವಾರಪೇಟೆ ಕಸಬಾ 10.4, ಶನಿವಾರಸಂತೆ 23.4, ಶಾಂತಳ್ಳಿ 72, ಕೊಡ್ಲಿಪೇಟೆ 13, ಕುಶಾಲನಗರ 2.4, ಸುಂಟಿಕೊಪ್ಪ 8 ಮಿ.ಮೀ. ಮಳೆಯಾಗಿದೆ.

ಹಾರಂಗಿ ಜಲಾಶಯದ ನೀರಿನ ಸ್ಥಿತಿಗತಿ:

ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು. ಇಂದಿನ ನೀರಿನ ಮಟ್ಟ 2811.62 ಅಡಿಗಳಷ್ಟಿದೆ. ಕಳೆದ ವರ್ಷ ಇದೇ ದಿನ 2800.07 ಅಡಿಯಷ್ಟು ನೀರಿತ್ತು. ಇಂದಿನ ನೀರಿನ ಒಳ ಹರಿವು 680 ಕ್ಯೂಸೆಕ್ ನಷ್ಟಿದೆ. ಕಳೆದ ವರ್ಷ ಇದೇ ದಿನ ನೀರಿನ ಒಳಹರಿವು 390 ಕ್ಯೂಸೆಕ್ಸ್ ನಷ್ಟಿತ್ತು ಎಂದು ವರದಿಯಾಗಿದೆ.

-ಎನ್.ಬಿ.ಎನ್.

Leave a Reply

comments

Related Articles

error: