ಸುದ್ದಿ ಸಂಕ್ಷಿಪ್ತ

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದುಕೊಳ್ಳಲು ಸೂಚನೆ

ಮಡಿಕೇರಿ, ಜೂ.14 : ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006ರ ಪ್ರಕಾರ ಎಲೆ-ಅಡಿಕೆ ಸೇವನೆ ಸಂದರ್ಭದಲ್ಲಿ ಉಪಯೋಗಿಸುವ ಸುಣ್ಣವನ್ನು ಪೌಚ್ ಹಾಗೂ ಟ್ಯೂಬ್‍ಗಳಲ್ಲಿ ತಯಾರಿಸುವುದು ಹಾಗೂ ಮಾರಾಟ ಮಾಡುವುದನ್ನು ಕರ್ನಾಟಕ ರಾಜ್ಯದ ಆಹಾರ ಸುರಕ್ಷತಾ ಆಯುಕ್ತರು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.

ಇದರ ಅನುಸಾರ ಕೊಡಗು ಜಿಲ್ಲೆಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಪೌಚ್ ಹಾಗೂ ಟ್ಯೂಬ್‍ಗಳಲ್ಲಿ ಸುಣ್ಣ ತಯಾರಿಸುವುದು, ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಸುಣ್ಣವನ್ನು ಡಬ್ಬಿಗಳಲ್ಲಿ ಮಾತ್ರ ತಯಾರಿಸುವುದು ಹಾಗೂ ಮಾರಾಟ ಮಾಡಬಹುದಾಗಿದೆ.

ಆದ್ದರಿಂದ ಜಿಲ್ಲಾ ವ್ಯಾಪ್ತಿಯಲ್ಲಿ ಪೌಚ್ ಹಾಗೂ ಟ್ಯೂಬ್‍ಗಳಲ್ಲಿ ಸುಣ್ಣ ತಯಾರಿಕೆ ಮತ್ತು ಮಾರಾಟ ಕಂಡುಬಂದರೆ, ಅಂತಹವರ ವಿರುದ್ಧ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಹಾಗೂ ನಿಯಮ ನಿಬಂಧನೆಗಳ ಅಡಿಯಲ್ಲಿ ಕ್ರಮ ಜರುಗಿಸಲಾಗುವುದು ಎಂದು ಮಡಿಕೇರಿ ಅಂಕಿತಾಧಿಕಾರಿ(ಎಫ್.ಎಸ್.ಎಸ್.ಎ) ಡಾ.ಎಂ.ಶಿವಕುಮಾರ್ ಅವರು ತಿಳಿಸಿದ್ದಾರೆ. (ವರದಿ: ಕೆಸಿಐ, ಎಲ್.ಜಿ)

Leave a Reply

comments

Related Articles

error: