ಮೈಸೂರು

ಜೂ.15ರಂದು ಶೌಚಾಲಯ ನಿರ್ಮಾಣ ಕಾರ್ಯಾದೇಶ ವಿತರಣೆ ಅಭಿಯಾನ

ಚಾಮರಾಜನಗರ, ಜೂ. 14 : ಸ್ವಚ್ಚಭಾರತ್ ಮಿಷನ್ ಅಡಿ ಶೌಚಾಲಯ ನಿರ್ಮಾಣಕ್ಕಾಗಿ ಜಿಲ್ಲೆಯ ನಾಲ್ಕೂ ತಾಲೂಕುಗಳ ಪಂಚಾಯತ್‍ಗಳಲ್ಲಿ ಜೂನ್ 15ರಂದು ಏಕಕಾಲಕ್ಕೆ ಕಾರ್ಯಾದೇಶ ವಿತರಿಸುವ ಅಭಿಯಾನವನ್ನು ಜಿಲ್ಲಾ ಪಂಚಾಯತ್ ಏರ್ಪಡಿಸಿದೆ.

ಸ್ವಚ್ಚ ಭಾರತ್ ಮಿಷನ್ ಕಾರ್ಯಕ್ರಮದಡಿ ಶೇ. 100ರಷ್ಟು ಗುರಿ ಸಾಧಿಸುವ ಸಲುವಾಗಿ ಜೂನ್ 15ರಂದು ಬೆಳಿಗ್ಗೆ 6.30 ಗಂಟೆಯಿಂದ ಶೌಚಾಲಯ ನಿರ್ಮಾಣಕ್ಕಾಗಿ ಕಾರ್ಯಾದೇಶ ವಿತರಿಸಲಾಗುತ್ತದೆ.

ಫಲಾನುಭವಿಗಳು ಆಯಾ ಗ್ರಾಮದಲ್ಲೇ ಆಧಾರ್ ಕಾರ್ಡ್, ಪಡಿತರ ಚೀಟ, ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್ ಪ್ರತಿ ಹಾಗೂ ಪಾಸ್ ಪೋರ್ಟ್ ಅಳತೆಯ ಭಾವಚಿತ್ರಗಳನ್ನು ಸಲ್ಲಿಸಿ ಶೌಚಾಲಯ ನಿರ್ಮಾಣಕ್ಕೆ ಕಾರ್ಯಾದೇಶ ಪಡೆಯಬಹುದು.

ಅಭಿಯಾನದ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧಿಕಾರಿ, ಸಿಬ್ಬಂದಿ ಹಾಜರಿದ್ದು ಫಲಾನುಭವಿಗಳಿಂದ ಅಗತ್ಯ ದಾಖಲೆಗಳನ್ನು ಪಡೆದು ಕ್ರಮ ವಹಿಸಲಿದ್ದಾರೆಂದು ಜಿಲ್ಲಾ ಪಂಚಾಯತ್ ಪ್ರಕಟಣೆ ತಿಳಿಸಿದೆ.

-ಎನ್.ಬಿ.ಎನ್.

Leave a Reply

comments

Related Articles

error: