ದೇಶಲೈಫ್ & ಸ್ಟೈಲ್

ಮಾನಸಿಕ ಆರೋಗ್ಯ ಕಾಳಜಿ ಮಸೂದೆ- 2016

ಮಾನಸಿಕ ಆರೋಗ್ಯ ಕಾಳಜಿ ಮಸೂದೆ-2016 ಅನ್ನು ರಾಜ್ಯಸಭೆ ಇತ್ತೀಚೆಗೆ ಆಂಗೀಕರಿಸಿದೆ. ಇದು ವೈಯಕ್ತಿಕ ಹಾಗೂ ಕುಟುಂಬಗಳನ್ನು ಸಬಲೀಕರಣಗೊಳಿಸುವ ಸರ್ಕಾರದ ಜವಾಬ್ದಾರಿಯನ್ನು ವಿವರಿಸುತ್ತದೆ. 1987ರ ಮಾನಸಿಕ ಆರೋಗ್ಯ ಕಾಯ್ದೆಯ ಬದಲು ಇದು ಜಾರಿಗೆ ಬರಲಿದೆ.

ಮಾನಸಿಕ ಅಸ್ವಸ್ಥತೆ ಎಂದರೇನು?
ಮಾನಸಿಕ ಅಸ್ವಸ್ಥತೆ ಎಂದರೆ, ಯೋಚನೆ, ಮನೋಸ್ಥಿತಿ, ಮನೋಭಾವ, ಕೇಳುವಿಕೆ ಅಥವಾ ಸ್ಮರಣ ಶಕ್ತಿಯಲ್ಲಿ ವ್ಯಾಪಕ ಪ್ರಮಾಣದ ವ್ಯತ್ಯಯ ಇರುವುದು ಅಥವಾ ನಿರ್ಧಾರಗಳನ್ನು ಕೈಗೊಳ್ಳುವ ನಡವಳಿಕೆಯಲ್ಲಿ, ವಾಸ್ತವವನ್ನು ಗುರುತಿಸುವ ಸಾಮರ್ಥ್ಯದ ಕೊರತೆ ಅಥವಾ ಜೀವನಾವಶ್ಯಕವಾದ ಬೇಡಿಕೆಗಳನ್ನು ಪೂರೈಸುವ ಜ್ಞಾನ ತಿಳುವಳಿಕೆ ಇಲ್ಲದಿರುವುದು, ಆಲ್ಕೋಹಾಲ್ ಮತ್ತು ಡ್ರಗ್ಸ್ ಚಟಗಳಿಗೆ ದಾಸರಾಗಿರುವುದು. ಆದರೆ ಕಾಯ್ದೆಯಡಿಯಲ್ಲಿ ಅಪೂರ್ಣ ಮೆದುಳು ಬೆಳವಣಿಗೆ ಅಥವಾ ಮೆದುಳು ಬೆಳವಣಿಗೆ ಸ್ಥಗಿತಗೊಂಡ ಪ್ರಕರಣಗಳು ಸೇರುವುದಿಲ್ಲ.

2016ರ ಮಾನಸಿಕ ಆರೋಗ್ಯ ಕಾಳಜಿ ಮಸೂದೆಯ ಪ್ರಮುಖ ಅಂಶಗಳು:
* ಮಾನಸಿಕ ಆರೋಗ್ಯ ಕಾಳಜಿ ಮಸೂದೆ-2016, ಪ್ರತಿಯೊಬ್ಬರಿಗೂ ಮಾನಸಿಕ ಆರೋಗ್ಯ ಕಾಳಜಿ ಮತ್ತು ಚಿಕಿತ್ಸೆಯನ್ನು ಸರ್ಕಾರಿ ಅನುದಾನಿತ ಮಾನಸಿಕ ಆರೋಗ್ಯ ಸೇವೆಗಳ ಸಂಸ್ಥೆಗಳಿಂದ ಪಡೆಯಲುಬಹುದು.
* ಈ ಆರೋಗ್ಯ ಕೇಂದ್ರಗಳಲ್ಲಿ  ಅನುಸೂಚಿತ ಔಷಧಿಗಳನ್ನು ಉಚಿತವಾಗಿ, ಮಾನಸಿಕ ಅಸ್ವಸ್ಥರಿಗೆ ಸರ್ಕಾರದ ಮೂಲಕ ಪೂರೈಸಲಾಗುತ್ತದೆ.
* ಜಿಲ್ಲಾಮಟ್ಟದಲ್ಲಿ ಮಾನಸಿಕ ಆರೋಗ್ಯ ಸೇವೆಗಳು ಸಿಗುವಂತಾಗಬೇಕು ಎನ್ನುವುದು ಈ ಮಸೂದೆಯ ಮೂಲ ಉದ್ದೇಶವಾಗಿದೆ.
* ಇದು ಮಾನಸಿಕ ಅಸ್ವಸ್ಥರ ಆತ್ಮಹತ್ಯೆ ಪ್ರಯತ್ನದಂಥ ಪ್ರಕರಣಗಳನ್ನು ಅಪರಾಧ ಎಂದು ಪರಿಗಣಿಸುವುದಿಲ್ಲ. (ಯಾವುದೇ ಆತ್ಮಹತ್ಯೆ ಯತ್ನವನ್ನು ಅಪರಾಧ ಎಂದು ಪರಿಗಣಿಸಿ ಒಂದು ವರ್ಷ ಜೈಲು ಶಿಕ್ಷೆ ವಿಧಿಸುವ ಭಾರತೀಯ ದಂಡಸಂಹಿತೆಯ ಸೆಕ್ಷನ್ 309ನ್ನು ತೆಗೆದುಹಾಕಲು ಈಗಾಗಲೇ ನಿರ್ಧರಿಸಲಾಗಿದೆ).
 

ಕಾಯ್ದೆಯಲ್ಲಿ ಏನಿದೆ – ಏನಿಲ್ಲ?

* ಇದರ ಅನ್ವಯ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವವರು ತಮಗೆ ಯಾವ ಬಗೆಯ ಚಿಕಿತ್ಸೆ ಪಡೆಯಬೇಕು ಎನ್ನುವುದನ್ನು ತಾವೇ ನಿರ್ಧರಿಸಿಕೊಳ್ಳಲು ಅವಕಾಶ ಇರುತ್ತದೆ.

* ಇದು ಮಾನಸಿಕ ಅಸ್ವಸ್ಥರನ್ನು ಅಮಾನವೀಯವಾಗಿ ಕಾಣುವುದು ಮತ್ತು ಹಿಂಸೆ ನೀಡುವುದನ್ನು ನಿಷೇಧಿಸುತ್ತದೆ. ಇದರ ಜತೆಗೆ ಮಾನಸಿಕ ಅಸ್ವಸ್ಥತೆ ವಿಷಯವನ್ನು ಸೂಕ್ಷ್ಮ ವಿಷಯವೆಂದು ಪರಿಗಣಿಸಿದ್ದು, ಅತಿ ಒತ್ತಾಯಪೂರ್ವಕವಾಗಿ ಸಾಂಸ್ಥಿಕ ಮಟ್ಟದ ಚಿಕಿತ್ಸೆ ನೀಡುವುದನ್ನೂ ಸಹ ಈ ಕಾಯ್ದೆ ಅಪರಾಧ ಎಂದು ಪರಿಗಣಿಸುತ್ತದೆ.

* ಮಾನಸಿಕ ಅಸ್ವಸ್ಥರಿಗಾಗಿಯೇ ಪ್ರತ್ಯೇಕ ವಿಮಾ ಯೋಜನೆಗಳನ್ನು ಆರಂಭಿಸುವುದನ್ನು ಕಡ್ಡಾಯಗೊಳಿಸುತ್ತದೆ. ದೈಹಿಕ ಕಾಯಿಲೆಗಳಿಗೆ ವಿಮಾ ಯೋಜನೆಗಳನ್ನು ನೀಡುವಂತೆ ಮಾನಸಿಕ ಕಾಯಿಲೆಗಳಿಗೂ ವಿಮಾ ಪಾಲಿಸಿ ನೀಡಬೇಕಾಗುತ್ತದೆ. ಇದರ ಬಗ್ಗೆ ಕಾಯ್ದೆಯಲ್ಲಿ ಸ್ಪಷ್ಟ ಉಲ್ಲೇಖವಿಲ್ಲ.
* ಈ ಮಸೂದೆಯು ಮಾನಸಿಕ ಚಿಕಿತ್ಸೆ ನೀಡುವಲ್ಲಿ ಕೇವಲ ಚಿಕಿತ್ಸಕರ ಪಾತ್ರವನ್ನು ಮಾತ್ರ ಗುರುತಿಸಿದೆ. ಆದರೆ ಮಾನಸಿಕ ಹಾಗೂ ಭಾವನಾತ್ಮಕ ಒತ್ತಡದಿಂದ ಬಳಲುತ್ತಿರುವವರಿಗೆ ಸಲಹೆ ನೀಡುವ ಮತ್ತು ಚಿಕಿತ್ಸೆ ನೀಡುವ ಬಗ್ಗೆ ಇದರಲ್ಲಿ ಯಾವ ಉಲ್ಲೇಖವೂ ಇಲ್ಲ.
* ಈ ಮಸೂದೆ ಎಲ್ಲ ಮಾನಸಿಕ ಆರೋಗ್ಯ ಕಾಳಜಿ ಸೌಲಭ್ಯದ ಸಮಸ್ಯೆಗಳ ಬಗ್ಗೆ ವಿವರಿಸುತ್ತದೆ. ಆದರೆ ಮಾನಸಿಕ ಅಸ್ವಸ್ಥತೆಯಿಂದ ಬಳಲುವ ಪ್ರತಿಯೊಬ್ಬರೂ ಚಿಕಿತ್ಸೆ ಪಡೆಯುವ ಬಗ್ಗೆ ಇದರಲ್ಲಿ ಯಾವ ಉಲ್ಲೇಖವೂ ಇಲ್ಲ.
* ಮಾನಸಿಕ ರೋಗಿಗಳ ಒತ್ತಡ ಕಡಿಮೆ ಮಾಡಿ, ವೇಗವಾಗಿ ಸುಧಾರಿಸಲು ಇರುವ ಹೊಸ ವಿಧಾನಗಳಾದ ಕಲೆ ಆಧರಿತ ಚಿಕಿತ್ಸಾ ಪದ್ಧತಿಗಳ ಬಗ್ಗೆ ಇದು ಯಾವುದೇ ಉಲ್ಲೇಖವನ್ನು ಒಳಗೊಂಡಿಲ್ಲ.

ಯಶಸ್ವಿ ಅನುಷ್ಠಾನಕ್ಕೆ ಇರುವ ತಡೆಗಳು:
• ಕೇಂದ್ರ ಸರ್ಕಾರವು ಆರೋಗ್ಯ ಕ್ಷೇತ್ರಕ್ಕೆ ನೀಡುವ ಒಟ್ಟು ಅನುದಾನದ ಶೇಕಡ 1 ರಷ್ಟನ್ನು ಮಾತ್ರ ಮಾನಸಿಕ ಆರೋಗ್ಯ ಕ್ಷೇತ್ರಕ್ಕೆ ನಿಗದಿಪಡಿಸಿದೆ.
• ಭಾರತದಲ್ಲಿ ಮಾನಸಿಕ ಆರೋಗ್ಯ ಚಿಕಿತ್ಸಕರ ಕೊರತೆ ವ್ಯಾಪಕವಾಗಿದೆ. ಅಂದರೆ ಪ್ರತಿ ನಾಲ್ಕು ಲಕ್ಷ ಮಂದಿಗೆ ಒಬ್ಬರಂತೆ ಮಾನಸಿಕ ವೈದ್ಯರಿದ್ದಾರೆ.
• ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷದ ಅಕ್ಟೋಬರ್ 10 ನೇ ದಿನವನ್ನು ವಿಶ್ವ ಮಾನಸಿಕ ಆರೋಗ್ಯ ದಿನವೆಂದು ‘ವಲ್ಡ್ ಫೆಡರೇಶನ್ ಆಫ್ ಮೆಂಟಲ್ ಹೆಲ್ತ್’ ಸಂಘಟನೆಯು ಆಚರಿಸುತ್ತಾ ಬಂದಿದೆ.

– ರೇಖಾ ಪ್ರಕಾಶ್‍

Leave a Reply

comments

Related Articles

error: