ಮೈಸೂರು

ಕೆ.ಆರ್.ಆಸ್ಪತ್ರೆಯಲ್ಲಿ ಹೆಚ್ಚುತ್ತಿರುವ ರೋಗಿಗಳ ಸಂಖ್ಯೆ : ಹಾಸಿಗೆಗೂ ತತ್ವಾರ

ಮೈಸೂರು, ಜೂ.15:- ಮಳೆಗಾಲ ಆರಂಭವಾಗಿದ್ದರಿಂದ ಹಲವು ರೋಗ ರುಜಿನಗಳು ಮನುಷ್ಯನನ್ನು ಹುಡುಕಿಕೊಂಡು ಬರುತ್ತಿವೆ. ನಿಂತ ನೀರುಗಳಲ್ಲಿ ಉತ್ಪತ್ತಿಯಾಗುವ ಸೊಳ್ಳೆಗಳು ಈ ಎಲ್ಲ ರೋಗಗಳಿಗೆ ಕಾರಣವಾಗಿದ್ದು ಮೈಸೂರಿನ ಸರ್ಕಾರಿ ಆಸ್ಪತ್ರೆಯಾದ ಕೆ.ಆರ್.ಆಸ್ಪತ್ರೆಯಲ್ಲಿ ದಿನೇ ದಿನೇ ರೋಗಿಗಳ ಸಂಖ್ಯೆ ಹೆಚ್ಚುತ್ತಿದ್ದು,  ರೋಗಿಗಳಿಗೆ ಹಾಸಿಗೆಗೂ ತತ್ವಾರ ಕಂಡು ಬಂದಿದೆ.

ಹಾಸನ, ಚಾಮರಾಜನಗರ, ಮಂಡ್ಯ ಜಿಲ್ಲೆ  ಮೈಸೂರು ಜಿಲ್ಲೆಯ ಹಲವು ತಾಲೂಕುಗಳು, ಕೆ.ಆರ್.ನಗರ ಸೇರಿದಂತೆ ಹಲವೆಡೆಗಳಿಂದ ಚಿಕಿತ್ಸೆಗಾಗಿ ರೋಗಿಗಳು ಕೆ.ಆರ್.ಆಸ್ಪತ್ರೆಗೆ ಬರುತ್ತಿದ್ದಾರೆ. ದಿನಕ್ಕೆ 20ರಿಂದ 25ಮಂದಿ ಜ್ವರ ಪೀಡಿತರು ಬರುತ್ತಾರಂತೆ. ಅವರನ್ನು 5ರಿಂದ 6ದಿನಗಳ ಕಾಲ ಆಸ್ಪತ್ರೆಯಲ್ಲಿಯೇ ಇರಿಸಿ  ಚಿಕಿತ್ಸೆ ನೀಡಬೇಕು. ರೋಗಿಗಳು ಬಂದ ತಕ್ಷಣ ಅವರಿಗೆ ಡೆಂಗ್ಯೂ, ಚಿಕುನ್ ಗುನ್ಯಾ, ಮಲೇರಿಯಾ ಎಂದು ಹೇಳಲು ಸಾಧ್ಯವಿಲ್ಲ. ರಕ್ತ ಪರೀಕ್ಷೆಗಳನ್ನು ಮಾಡಿಸಬೇಕು. ರಕ್ಷ ಪರೀಕ್ಷೆ ಮಾಡಿಸಿದಾಗ ಬಿಳಿರಕ್ತ ಕಣಗಳು ಕಡಿಮೆ ಇರೋರೇ ಕಾಣ ಸಿಗುತ್ತಾರೆ. ಅದರಿಂದ ಅವರನ್ನು ಆಸ್ಪತ್ರೆಯಲ್ಲೇ ಇರಿಸಿ ಚಿಕಿತ್ಸೆ ನೀಡಬೇಕಾಗುತ್ತದೆ. ಹಾಸಿಗೆಯ ಸಮಸ್ಯೆ ಎದುರಾಗುತ್ತದೆ ಎಂದು ವೈದ್ಯರು ತಿಳಿಸಿದರು.

ಪ್ರತಿದಿನ ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವುದರಿಂದ ಆಸ್ಪತ್ರೆ ಗಿಜಿಗುಟ್ಟುತ್ತಿರುತ್ತದೆ. ರೋಗಿಗಳ ಚೀರಾಟ, ಕೂಗಾಟ, ನರಳಾಟ ಹೆಚ್ಚುತ್ತಿದ್ದು  ಪ್ರತಿರೋಗಿಯೆಡೆಗೂ ಸರಿಯಾಗಿ ಗಮನಹರಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಬಂಧಪಟ್ಟವರು ಇದಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಟ್ಟರೆ ಒಳ್ಳೆಯದು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: