ಕರ್ನಾಟಕ

ಬಸ್ಸು ಮತ್ತು ಹೊಂಡ ಆಕ್ಟೀವ ನಡುವೆ ಭೀಕರ ಅಪಘಾತ: ಓರ್ವ ಸಾವು

ರಾಜ್ಯ, (ಕೊಡಗು) ಜೂ.15:  ಖಾಸಗಿ ಬಸ್  ಮತ್ತು ಹೊಂಡ ಆಕ್ಟೀವ  ನಡುವೆ ಭೀಕರ ಅಪಘಾತವಾಗಿ  ಓರ್ವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಕಡಗದಾಳು ಸಮೀಪದ ತುರ್ಕರಟ್ಟಿ ಎಂಬಲ್ಲಿ ನಡೆದಿದೆ.

ಮೂರ್ನಾಡುವಿನ ಲಿಂಗಪ್ಪ ಎಂಬವರು ಮೃತ ದುರ್ದೈವಿ. ಈತನ ತಲೆಭಾಗಕ್ಕೆ ಬಸ್ಸಿನ  ಚಕ್ರ ಹರಿದ ಪರಿಣಾಮ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಮತ್ತೋರ್ವ ತನು ಎಂಬವರು ಗಂಭೀರವಾಗಿ ಗಾಯಗೊಂಡಿದ್ದು,  ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳಕ್ಕೆ ಮಡಿಕೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ,  ಬಸ್ಸನ್ನು ಹಿಂದಿಕ್ಕಲು ಪ್ರಯತ್ನಿಸುವ ಸಂದರ್ಭದಲ್ಲಿ  ರಸ್ತೆಯ ಬದಿಯಲ್ಲಿದ್ದ ಮರಳಿನ ಮೇಲೆ ಸಂಚರಿಸುವ ಸಂದರ್ಭ ಹೊಂಡ ಆಕ್ಟೀವ  ಸ್ಕಿಡ್ ಆಗಿ ಹತೋಟಿ ತಪ್ಪಿ ಬಸ್ಸಿನ ಚಕ್ರದಡಿ ಬಿದ್ದಿರುವುದಾಗಿ ಮಾಹಿತಿ ನೀಡಿದ್ದಾರೆ.

ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿಕೇರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ವರದಿ: ಎಸ್.ಎನ್, ಎಲ್.ಜಿ)

Leave a Reply

comments

Related Articles

error: