ಸುದ್ದಿ ಸಂಕ್ಷಿಪ್ತ

ವಿದ್ಯಾರ್ಥಿ ವೇತನ: ಶಾಲಾ ವರ್ಗಾವಣೆಯಾಗಿದ್ದಲ್ಲಿ ಮಾಹಿತಿ ಸಲ್ಲಿಸಿ

ಮೈಸೂರು,ಜೂ.15-ಸಮಾಜ ಕಲ್ಯಾಣ ಇಲಾಖಾ ವತಿಯಿಂದ 2017-18ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ ಮಂಜೂರಾತಿಗಾಗಿ ನೋಂದಣಿಯಾದ ವಿದ್ಯಾರ್ಥಿಗಳು ಬೇರೆ ಶಾಲೆಗೆ ವರ್ಗಾವಣೆಗೊಂಡು ದಾಖಲಾಗಿದ್ದಲ್ಲಿ ಅಂತಹ ವಿದ್ಯಾರ್ಥಿಗಳ ವಿವರವನ್ನು ಆನ್‍ಲೈನ್‍ನಲ್ಲೂ ವರ್ಗಾವಣೆ ಮಾಡಬೇಕಾಗಿರುತ್ತದೆ.

ಶಾಲಾ ಮುಖ್ಯೋಪಾಧ್ಯಾಯರು ಅನುಬಂಧ-1 ಅನ್ನು ಸಹಾಯಕ ನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಮೈಸೂರು ತಾಲೂಕು, ಮೈಸೂರುರವರಿಂದ  ಪಡೆದು ಬೇರೆ ಶಾಲೆಯಿಂದ ವರ್ಗಾವಣೆಗೊಂಡು ದಾಖಲಾದ ಪರಿಶಿಷ್ಟ ಜಾತಿ  ವಿದ್ಯಾರ್ಥಿಗಳ ವಿವರವನ್ನು ಭರ್ತಿಮಾಡಿ ಜೂ.30 ರೊಳಗೆ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಶ್ರೀ ಮುರುಗಾದೇವಿ ದೇವಸ್ಥಾನದ ಎದುರು, ಸರ್ಕಾರಿ ಸಾರ್ವಜನಿಕ ಬಾಲಕರ ವಿದ್ಯಾರ್ಥಿನಿಲಯದ ಆವರಣ, ನಜರ್‍ಬಾದ್, ಮೈಸೂರು-10, ದೂ.ಸಂ. 0821-2520910 ಸಂಪರ್ಕಿಸಬಹುದು. (ವರದಿ-ಎಂ.ಎನ್)

Leave a Reply

comments

Related Articles

error: