ಮೈಸೂರು

ನಂಜುಂಡೇಶ್ವರನ ಸನ್ನಿಧಿಯಲ್ಲಿ ಮಹಿಳೆ ನೇಣಿಗೆ ಶರಣು

ಮೈಸೂರು, ಜೂ.15: ದಕ್ಷಿಣಕಾಶಿ ನಂಜನಗೂಡಿನ ನಂಜುಂಡೇಶ್ವರನ ಸನ್ನಿಧಿಯಲ್ಲಿಯೇ ಅಪರಿಚಿತ ಮಹಿಳೆಯೋರ್ವರು ನೇಣಿಗೆ ಶರಣಾಗಿರುವ ಘಟನೆ ನಡೆದಿದೆ.

ಮೃತ  ಮಹಿಳೆಯನ್ನು 50 ವರ್ಷದ ತಮಿಳು ಮೂಲದವಳೆಂದು ಪೊಲೀಸರು ಶಂಕಿಸಿದ್ದಾರೆ.  ನಂಜುಂಡೇಶ್ವರನ ಸನ್ನಿಧಿಯಲ್ಲಿ ಹರಿಯುವ ಕಬಿನಿ ನದಿಯ ದಡದಲ್ಲಿನ ಭಕ್ತಾಧಿಗಳು ಬಟ್ಟೆ ಬದಲಿಸುವ ಶೆಡ್ ನಲ್ಲಿ ನೇಣಿಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.

ನಂಜನಗೂಡು ಪಟ್ಟಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಂಜುಂಡೇಶ್ವರನ ಸನ್ನಿಧಿಯಲ್ಲಿ ಸತ್ತರೆ  ಸ್ವರ್ಗ ಪ್ರಾಪ್ತಿ ಎಂಬ ಮೌಢ್ಯದಿಂದ ಸನ್ನಿಧಿಯಲ್ಲಿ ಸಾವಿನ ಪ್ರಕರಣಗಳು ಹೆಚ್ಚುತ್ತಿವೆ ಎನ್ನಲಾಗಿದೆ. (ವರದಿ: ಆರ್.ವಿ, ಎಲ್.ಜಿ)

Leave a Reply

comments

Related Articles

error: