ಮೈಸೂರು

ರೇಡಿಯೋ ಕಂಟ್ರೋಲ್ಡ್ ಏರೋ ಮಾಡಲಿಂಗ್ ಗೆ ಚಾಲನೆ

air-show-web-1ಮೈಸೂರು ದಸರಾ ಸಮಿತಿ ಹಾಗೂ ಮೈಸೂರು ಫ್ಲೈಯಿಂಗ್ ಅಸೋಸಿಯೇಶನ್  ವತಿಯಿಂದ ರೇಡಿಯೋ ಕಂಟ್ರೋಲ್ಡ್ ಏರೋ ಮಾಡಲಿಂಗ್ ಗೆ ಶುಕ್ರವಾರ ಬನ್ನಿಮಂಟಪದ  ಪಂಜಿನ ಕವಾಯತು  ಮೈದಾನದಲ್ಲಿ ಚಾಲನೆ ನೀಡಲಾಯಿತು.

ಮೈಸೂರು ದಸರಾ ಉಪ ಸಮಿತಿಯು ಆಯೋಜಿಸಿದ್ದ ಆಕರ್ಷಣೆಗಳಲ್ಲಿ ರೇಡಿಯೋ ಕಂಟ್ರೋಲ್ಡ್ ಏರೋ ಮಾಡಲಿಂಗ್ ಒಂದಾಗಿದ್ದು, ಬನ್ನಿಮಂಟಪದಲ್ಲಿ ನೂರಾರು ಜನರು ಪ್ರದರ್ಶವನ್ನು ವೀಕ್ಷಿಸಿದರು. ಸಂಸದ ಪ್ರತಾಪ್ ಸಿಂಹ ಚಾಲನೆ ನೀಡಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಯುವಜನತೆಗೆ ಈ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳಿದ್ದು ತಮ್ಮ ಕೌಶಲ್ಯ ತೋರಿಸಬಹುದು ಎಂದರು.

ಕೌಶಲ್ಯ ಸಾಮರ್ಥ್ಯ ಹೊಂದಿದ ಎಲೆಕ್ಟ್ರಿಕ್ ಸ್ಕೈ ಸರ್ಫರ್ಸ್, ಹೈವಿಂಗ್, ಮೈಂಡ್ ವಿಂಗ್, ಮತ್ತು ಲೋ ವಿಂಗ್,  ರವೆನ್ 35,  ಟುಕಾನೋ-90 ಹಾರಾಟ ನಡೆಸಿತು.  ಬಳಿಕ ಹೆಕ್ಸಾ ಕಾಪ್ಟರ್ಸ್, ಒಕ್ಟಾ ಕಾಪ್ಟರ್, ಕ್ವಾಡ್ ಕಾಪ್ಟರ್, ವಿದ್ಯುತ್ ಚಾಲಿತ ಮಿನಿ ಹೆಲಿಕಾಪ್ಟರ್ ಗಳು ಪ್ರದರ್ಶನದಲ್ಲಿ ಹಾರಾಟ ನಡೆಸಿದವು.

11 ವರ್ಷದ ಹಳೆಯ ವಿದ್ಯುತ್ ಚಾಲಿತ ಆದಿತ್ಯ ಪ್ರದರ್ಶನದಲ್ಲಿ ಹಾರಾಟ ನಡೆಸಿ ಪ್ರೇಕ್ಷಕರಿಂದ ಪ್ರಶಂಸೆ ಪಡೆಯಿತು. ನಗರದ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಸಿದ್ಧಪಡಿಸಿದ 68 ಕೆ.ಜಿ. ತೂಕದ ನಿಶ್ಚಲ ಮಾದರಿಯ ಬೋಯಿಂಗ್ 747-8  ಪ್ರಮುಖ ಆಕರ್ಷಣೆಯಾಗಿತ್ತು. ‘ಸಿಟಿಟುಡೆ’ಯೊಂದಿಗೆ ತಂಡದ ನಾಯಕ ಸ್ವಸ್ತಿಕ್ ಎಸ್. ರಾವ್ ಮಾತನಾಡಿ ನಾವು ಇದನ್ನು ಸಿದ್ಧಪಡಿಸಲು  2.5 ತಿಂಗಳು ತೆಗೆದುಕೊಂಡಿದ್ದೇವೆ. ಅಲ್ಯುಮಿನಿಯಂ, ಹಾರ್ಡ್ ರಬ್ಬರ್, ಪ್ಲೈವುಡ್ ಮತ್ತು ಫಾಮ್ ವುಡ್ ಬಳಸಿ 18 ಅಡಿ ಉದ್ದದ ವಿಮಾನ ನಿರ್ಮಿಸಿದ್ದೇವೆ. ಈ ಕುರಿತು ಜಾಗೃತಿ ಮೂಡಿಸಲು ಕಾರ್ಯಾಗಾರನ್ನು ನಡೆಸಿದ್ದೇವೆ. ಇದೀಗ ನಮಗೆ ಒಳ್ಳೆಯ ವೇದಿಕೆ ದೊರೆತಂತಾಯಿತು ಎಂದರು.

Leave a Reply

comments

Related Articles

error: