
ಕರ್ನಾಟಕಪ್ರಮುಖ ಸುದ್ದಿ
ಕರ್ತವ್ಯ ನಿರ್ವಹಿಸದೇ ಕಾರ್ಡ್ಸ್ ಆಡುತ್ತ ಕುಳಿತುಕೊಳ್ಳುವ ಕೆ.ಆರ್.ಪೇಟೆ ಠಾಣೆಯ ಪೊಲೀಸರು : ಇಲಾಖೆಗೆ ಜನರಿಂದ ಹಿಡಿಶಾಪ
ರಾಜ್ಯ(ಮಂಡ್ಯ) ಜೂ.15:- ರಕ್ಷಣೆಗಾಗಿ ಅಂತ ಇವರನ್ನು ನಿಯೋಜಿಸಿದ್ದರೆ, ಇವರು ಕಚೇರಿಗೆ ಹೋಗಿ ಸಹಿ ಹಾಕಿ ಕ್ವಾರ್ಟರ್ಸ್ ಗೆ ಬಂದು ಕಾರ್ಡ್ಸ್ ಆಡುತ್ತಾ ಕುಳಿತುಕೊಳ್ಳುತ್ತಾರಂತೆ ಇದು ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ಪೊಲೀಸರ ಕಾಯಕವಂತೆ!
ಪೊಲೀಸರ ಕಾಯಕವೇನು ಅಪರಾಧಿಗಳನ್ನು ಪತ್ತೆ ಹಚ್ಚೋದು, ಅವರಿಗೆ ಶಿಕ್ಷೆ ವಿಧಿಸುವುದು, ಅಪರಾಧ ನಡೆಯದಂತೆ ತಡೆಯುವುದು. ಆದರೆ ಪೊಲೀಸರೇ ಅಪರಾಧಿಗಳಾಗ ಹೊರಟರೇ, ಬೇಲಿಯೇ ಎದ್ದು ಹೊಲ ಮೇಯ್ದರೆ ರಕ್ಷಣೆ ಯಾರಿಂದ, ಯಾರ ಬಳಿ ಹೇಳುವುದು ಇಂಥಹ ಒಂದು ಪ್ರಶ್ನೆ ಇದೀಗ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ಜನತೆಯನ್ನು ಕಾಡುತ್ತಿದೆ. ಅದಕ್ಕೆ ಕಾರಣವೂ ಇದೆ. ಈಗ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮೂರ್ತಿ ನಾಯಕ್, ಜಯರಾಂ, ಶ್ರೀಕಾಂತ್, ಪ್ರಸನ್ನ ಈ ನಾಲ್ವರು ಪೊಲೀಸರು ಠಾಣೆಗೆ ಬಂದು ಸಹಿ ಮಾಡಿ ಕ್ವಾರ್ಟರ್ಸ್ ಗೆ ತೆರಳಿ ಕಾರ್ಡ್ಸ್ ಆಡುತ್ತಾ ಕುಳಿತುಕೊಳ್ಳುತ್ತಾರಂತೆ. ಇವರು ಪ್ರತಿದಿನವೂ ಹೀಗೆ ಕಾರ್ಡ್ಸ್ ಆಡುವುದನ್ನು ವಿಡಿಯೋವನ್ನು ಚಿತ್ರೀಕರಿಸಿ ಮಾಧ್ಯಮವೊಂದಕ್ಕೆ ಬಿಡುಗಡೆ ಮಾಡಿದ್ದಾರೆ. ಜೂಜು ಅಡ್ಡೆಗಳ ಮೇಲೆ ದಾಳಿ ನಡೆಸಿ ಅದನ್ನು ತಡೆ ಹಿಡಿಯುವ ಪೊಲೀಸರೇ ಜೂಜಿಗಿಳಿದರೆ ಜನಸಾಮಾನ್ಯರ ಕಥೆಯೇನು ಎಂದು ಸಾರ್ವಜನಿಕರು ಪೊಲೀಸ್ ಇಲಾಖೆಗೆ ಹಿಡಿಶಾಪ ಹಾಕುತ್ತಿದ್ದಾರಂತೆ.
ಇಂತಹ ಪೊಲೀಸರ ವಿರುದ್ಧ ಇಲಾಖೆ ಯಾವ ರೀತಿಯ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ. (ಕೆ.ಎಸ್,ಎಸ್.ಎಚ್)