ಸುದ್ದಿ ಸಂಕ್ಷಿಪ್ತ

ಮಹಿಳೆ ನಾಪತ್ತೆ

ಸೋಮವಾರಪೇಟೆ, ಜೂ.16: ಸಮೀಪದ ಜಂಬೂರು ಗ್ರಾಮದ ಮಹಿಳೆಯೋರ್ವರು ನಾಪತ್ತೆಯಾಗಿರುವ ಬಗ್ಗೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಂಬೂರು ಗ್ರಾಮದ ಕೇಶವ ಎಂಬವರ ಪತ್ನಿ ಸರಸ್ವತಿ (45) ಎಂಬವರೇ ನಾಪತ್ತೆಯಾದವರು. ಮೇ. 5ರಂದು 3.30ಕ್ಕೆ ಮಗಳ ಮನೆಗೆ ತೆರಳುವದಾಗಿ ಮಾದಾಪುರಕ್ಕೆ ಹೋಗಿದ್ದು, ನಂತರ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಅವರ ಮಗ ಮಂಜುನಾಥ್ ಅವರು ಠಾಣೆಗೆ ದೂರು ನೀಡಿದ್ದಾರೆ.

ಗೋಧಿ ಮೈಬಣ್ಣ, 5.3 ಅಡಿ ಎತ್ತರವಿರುವ ಸರಸ್ವತಿ ಅವರು ಕನ್ನಡ ಬಲ್ಲವರಾಗಿದ್ದು, ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಸೋಮವಾರಪೇಟೆ ಪೊಲೀಸ್ ಠಾಣೆಯನ್ನು (ದೂ: 08276 282040) ಸಂಪರ್ಕಿಸುವಂತೆ ಠಾಣಾಧಿಕಾರಿ ಶಿವಣ್ಣ ಅವರು ಮನವಿ ಮಾಡಿದ್ದಾರೆ. (ವರದಿ: ಕೆಸಿಐ, ಎಲ್.ಜಿ)

Leave a Reply

comments

Related Articles

error: