ಕ್ರೀಡೆಪ್ರಮುಖ ಸುದ್ದಿ

ಬದ್ಧ ವೈರಿಗಳ ಕದನಕ್ಕೆ  ವೇದಿಕೆ ಸಿದ್ಧ: ಐಸಿಸಿ ಸಿದ್ಧಪಡಿಸಿದೆ ಸ್ಪೆಷಲ್ ಪ್ರೋಮೋ

ಪ್ರಮುಖ ಸುದ್ದಿ, ಕ್ರೀಡೆ, ಲಂಡನ್, ಜೂ.16: ಕ್ರಿಕೆಟ್ ಲೋಕದ ಬದ್ಧ ವೈರಿಗಳು ಎಂದೇ ಬಿಂಬಿತವಾಗಿರುವ ಭಾರತ  ಹಾಗೂ ಪಾಕಿಸ್ತಾನ ನಡುವಿನ ಕದನಕ್ಕೆ ಐಸಿಸಿ ಚಾಂಪಿಯನ್ಸ್ ಟ್ರೋಪಿಯ ಫೈನಲ್ ಪಂದ್ಯದ ವೇದಿಕೆ ಸಿದ್ದವಾಗಿದ್ದು, ಕ್ರೀಡಾಭಿಮಾನಿಗಳಲ್ಲಿ ಕಾವು ಏರತೊಡಗಿದೆ.

ಐಸಿಸಿ ಸಾಂಪ್ರದಾಯಿಕ ವೈರಿಗಳ ಕದನಕ್ಕೆ ಜಾಗತಿಕ ವೇದಿಕೆ ಸಿದ್ಧಪಡಿಸಿದ್ದು, ಭಾನುವಾರ ನಡೆಯುವ ಪಂದ್ಯಕ್ಕೆ ಈಗಿನಿಂದಲೇ ವ್ಯಾಪಕ ಪ್ರಚಾರ ನೀಡುತ್ತಿದೆ. ಭಾರತ ಹಾಗೂ ಪಾಕಿಸ್ತಾನ ನಡುವಿನ ಫೈನಲ್ ಪಂದ್ಯದ ಪ್ರೋಮೋವನ್ನು ಐಸಿಸಿ ಸಿದ್ಧಪಡಿಸಿದ್ದು ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಕದನ ರೋಚಕ ಕ್ಷಣಗಳು ಹಾಗೂ ಉಭಯ ದೇಶಗಳ ಕ್ರೀಡಾಭಿಮಾನಿಗಳ ಸಂಭ್ರಮವನ್ನೊಳಗೊಂಡ ಪ್ರೋಮೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ಭಾರತಕ್ಕೆ ಚಾಂಪಿಯನ್ಸ್ ಟ್ರೋಪಿಯ 4ನೇ ಫೈನಲ್ ಪಂದ್ಯವಾದರೆ ಪಾಕಿಸ್ತಾನಕ್ಕೆ ಚೊಚ್ಚಲ ಫೈನಲ್ ಪಂದ್ಯವಾಗಿದೆ. ಇದರಿಂದ ಸಾಮಾನ್ಯವಾಗಿ ಕುತೂಹಲ ಹೆಚ್ಚಾಗಿದೆ. ಐಸಿಸಿ ಆಯೋಜಿಸಿರುವ ಟೂರ್ನಿಗಳಲ್ಲಿ ಪಾಕಿಸ್ತಾನ ವಿರುದ್ಧ ಅಜೇಯ ದಾಖಲೆ ಹೊಂದಿರುವ ಭಾರತ ಅದನ್ನೇ ಮುಂದುವರಿಸುವ ವಿಶ್ವಾಸದಲ್ಲಿದೆ. ಇತ್ತ ಪಾಕಿಸ್ತಾನ ತನ್ನ ಸೋಲಿನ ಸರಪಳಿಯನ್ನು ಕಳಚಿ ಫೈನಲ್ ಪಂದ್ಯದಲ್ಲಿ ಗೆದ್ದು ಚೊಚ್ಚಲ ಬಾರಿಗೆ ಪ್ರಶಸ್ತಿಗೆ ಮುತ್ತಿಕ್ಕುವ ಉತ್ಸಾಹದಲ್ಲಿದೆ. ಉಭಯ ತಂಡಗಳು ಬೌಲಿಂಗ್ ಹಾಗೂ ಬ್ಯಾಟಿಂಗ್ ವಿಭಾಗದಲ್ಲಿ ಬಲಿಷ್ಠವಾಗಿದ್ದು ಭಾನುವಾರ ನಡೆಯುವ ಪಂದ್ಯದಲ್ಲಿ ಜಿದ್ದಾಜಿದ್ದಿನ ಹೋರಾಟ ನಡೆಯಲಿದೆ. ಯಾರ ಪಾಲಿಗೆ ಸೂಪರ್ ಸಂಡೇ ಆಗಲಿದೆ ಕಾದು ನೋಡಬೇಕಿದೆ. (ವರದಿ ಬಿ.ಎಂ)

Leave a Reply

comments

Related Articles

error: