ಮೈಸೂರು

ಮೈಸೂರು ಕೇಂದ್ರ ರೈಲು ನಿಲ್ದಾಣದಲ್ಲಿ ಉಚಿತ ವೈ-ಫೈ ಸೇವೆಗೆ ಚಾಲನೆ

ಮೈಸೂರಿನ ಪ್ರತಿಷ್ಠಿತ ಇಂಟರ್ ನೆಟ್ ಪ್ರೊವೈಡರ್ ಆಗಿರುವ ಯಶ್ ಟೆಲ್ ಸಂಸ್ಥೆ ಮೈಸೂರು ಕೇಂದ್ರ ರೈಲ್ವೇ ನಿಲ್ದಾಣದಲ್ಲಿ ಉಚಿತ ವೈ-ಫೈ ಸೇವೆ ಕಲ್ಪಿಸಿದ್ದು ಸೌತ್ ವೆಸ್ಟರ್ನ್ ರೈಲ್ವೆ ಡಿವಿಜನ್  ಮ್ಯಾನೇಜರ್ ಅತುಲ್ ಗುಪ್ತಾ ಶುಕ್ರವಾರ ಅಧಿಕೃತವಾಗಿ ಚಾಲನೆ ನೀಡಿದರು.

4-ಜಿ ಸಾಮರ್ಥ್ಯದ ಇಂಟರ್ ನೆಟ್ ಸೇವೆ ಪ್ರಯಾಣಿಕರ ಸೇವೆಗೆ ಲಭ್ಯವಿದ್ದು, ರೈಲು ನಿಲ್ದಾಣದ ನಿಗದಿತ ವ್ಯಾಪ್ತಿಯಲ್ಲಿ ಸ್ಮಾರ್ಟ್ ಫೋನ್ ಬಳಕೆದಾರರು ನಮ್ಮ ಮೊಬೈಲ್ ಸಂಖ್ಯೆಯನ್ನು ದಾಖಲಿಸಿ ಉಚಿತವಾಗಿ ಲಾಗಿನ್ ಆಗುವ ಮೂಲಕ ಈ ಸೇವೆಯನ್ನು ಬಳಸಬಹುದು. ಆ ಮೂಲಕ ರೈಲ್ವೆ ಟಿಕೇಟ್ ಬುಕ್ಕಿಂಗ್, ಸೀಟು ಕಾಯ್ದಿರಿಸುವಿಕೆ, ರೈಲು ಆಗಮನ-ನಿರ್ಗಮನ ಮುಂತಾದ ಮಾಹಿತಿಯನ್ನು ಪಡೆಯಬಹುದಾಗಿದೆ. ಈ ರೀತಿ ಲಾಗಿನ್ ಆಗುವ ಬಳಕೆದಾರರ ಮಾಹಿತಿ ಯಾವುದೇ ರೀತಿ ದುರುಪಯೋಗವಾಗದ ರೀತಿಯಲ್ಲಿ ಅಗತ್ಯ ಸೆಕ್ಯೂರಿಟಿ ಕ್ರಮವನ್ನು ಯಶ್ ಟೆಲ್ ಸಂಸ್ಥೆ ಸಿದ್ಧಪಡಿಸಿದೆ. ರೈಲು ನಿಲ್ದಾಣದ ಆಸುಪಾಸಿನ ಅಂದಾಜು 300 ಮೀಟರ್ ವ್ಯಾಪ್ತಿಯೊಳಗೆ ಉಚಿತವಾಗಿ ವೈ-ಫೈ ಲಭ್ಯವಾಗಲಿದೆ. ಈ ಕುರಿತು ಐಶ್ ಟೆಲ್ ಸಂಸ್ಥೆಯ ಮಂಜುನಾಥ್ ಮಾತನಾಡಿ ಈಗಾಗಲೇ ಹಲವು ಕಡೆ ನಮ್ಮ ಸಂಸ್ಥೆ ಉತ್ತಮ ಸೇವೆ ನೀಡಿದ್ದು, ಮುಂದೆ ಮೈಸೂರಿನಾದ್ಯಂತ ಶೇಕಡಾ 60ರಷ್ಟು ಉಚಿತ ವೈ-ಫೈ ಸೇವೆ ಒದಗಿಸಲು ಮುಂದಾಗಿದ್ದೇವೆ ಎಂದರು.

Leave a Reply

comments

Related Articles

error: