ಸುದ್ದಿ ಸಂಕ್ಷಿಪ್ತ

ಜೂ.18ಕ್ಕೆ ಶ್ರೀರಾಮಾನುಜ ಸಹಸ್ರಮಾನೋತ್ಸವ

ಮೈಸೂರು.ಜೂ.16 : ರಾಮಾನುಜ ಸಹಸ್ರಮಾನೋತ್ಸವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಜೂ.18ರ ಸಂಜೆ 5.15ಕ್ಕೆ ಕೃಷ್ಣಮೂರ್ತಿಪುರಂನ ಶಾರದವಿಲಾಸ ಶತಮನೋತ್ಸವ ಭವನದಲ್ಲಿ ಶ್ರೀರಾಮಾನುಜಾಚಾರ್ಯ ಸಹಸ್ರಮಾನೋತ್ಸವ ಸಂಭ್ರಮಾಚರಣಾ ಸಮಿತಿ, ಶ್ರೀರಾಮಾನುಜಾಚಾರ್ಯ ಸಹಸ್ರಮಾನ ಸಭಾ ಟ್ರಸ್ಟ್ ಹಾಗೂ ಶ್ರೀರಾಮಾನುಜಾಚಾರ್ಯ ಸೇವಾ ಪ್ರತಿಷ್ಠಾನದಿಂದ ಆಯೋಜಿಸಲಾಗಿದ್ದು ನಿತ್ಯಗ್ರಂಥ ಕೃತಿ ಹಾಗೂ ಯತಿರಾಜ ಶ್ರೀರಾಮಾನುಜಾಚಾರ್ಯರು ಕಿರುಹೊತ್ತಿಗೆ ಬಿಡುಗಡೆಗೊಳಿಸಲಾಗುವುದು. ಖ್ಯಾತವಾಗ್ಮಿ ಮತ್ತು ಉದಯ ಟಿವಿ ಹರಟೆ ಕಾರ್ಯಕ್ರಮ ಖ್ಯಾತಿಯ ಹಿರೇಮಗಳೂರು ಕಣ್ಣನ್ ಹಾಗೂ ಆದಾಯ ತೆರಿಗೆ ಇಲಾಖೆ ಹೆಚ್ಚುವರಿ ಆಯುಕ್ತೆ ಹೆಚ್.ಎಲ್.ಸೌಮ್ಯ ಆಚಾರ್ ಭಾಗವಹಿಸುವರು. (ಕೆ.ಎಂ.ಆರ್)

Leave a Reply

comments

Related Articles

error: