ಸುದ್ದಿ ಸಂಕ್ಷಿಪ್ತ

ಪ್ರಥಮ ಮತ್ತು ದ್ವಿತೀಯ ಪಿ.ಯು.ಸಿ.ದಾಖಲಾತಿಗೆ ಅವಧಿ ವಿಸ್ತರಣೆ

ಮಡಿಕೇರಿ ಜೂ.16:-ಪ್ರಸಕ್ತ(2017-18ನೇ) ಶೈಕ್ಷಣಿಕ ಸಾಲಿಗೆ ಪ್ರಥಮ ಪಿಯುಸಿ ಹಾಗೂ ದ್ವಿತೀಯ ಪಿಯುಸಿ ತರಗತಿಗೆ ದಂಡ ಶುಲ್ಕವಿಲ್ಲದೇ ದಾಖಲಾಗಲು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ದಾಖಲಾತಿ ದಿನಾಂಕವನ್ನು ವಿಸ್ತರಿಸಲಾಗಿದೆ.

ಪ್ರಥಮ ಪಿ.ಯು.ಸಿ. ಹಾಗೂ ದ್ವಿತೀಯ ಪಿ.ಯು.ಸಿಗೆ ದಂಡ ಶುಲ್ಕವಿಲ್ಲದೆ ದಾಖಲಾಗಲು ಜೂನ್, 20 ಕೊನೆಯ ದಿನವಾಗಿದೆ. ವಿಳಂಬ ದಾಖಲಾತಿ ರೂ.504 ದಂಡ ಶುಲ್ಕದೊಂದಿಗೆ ಜೂನ್, 21 ರಿಂದ ಜುಲೈ, 01 ರವರೆಗೆ, ವಿಶೇಷ ದಂಡ ಶುಲ್ಕ 2,184 ಪಾವತಿಸಿ ಜುಲೈ, 3 ರಿಂದ ಜುಲೈ, 12 ರವರೆಗೆ ದಾಖಲಾತಿ ಮಾಡಿಕೊಳ್ಳಬಹುದು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು ತಿಳಿಸಿದ್ದಾರೆ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: