ಮೈಸೂರು

ಗಿನ್ನೆಸ್ ದಾಖಲೆ ನಿರ್ಮಿಸಲು ಲಾಂಗೆಸ್ಟ್ ಯೋಗ ಚೈನ್ ಪ್ರದರ್ಶನ ತಾಲೀಮು

ಮೈಸೂರು, ಜೂ.17:- ಅಂತಾರಾಷ್ಟ್ರೀಯ ಯೋಗದಿನದಂದು ಲಾಂಗೆಸ್ಟ್ ಯೋಗ ಚೈನ್ ಪ್ರದರ್ಶನದಲ್ಲಿ ಗಿನ್ನೆಸ್ ದಾಖಲೆ ನಿರ್ಮಿಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದ್ದು, ಈ ಹಿನ್ನೆಲೆಯಲ್ಲಿ ಶನಿವಾರ ಬೆಳಿಗ್ಗೆ 9.30ರಿಂದ ಮೈಸೂರು ಅರಮನೆ ಆವರಣದಲ್ಲಿ ತಾಲೀಮು ನಡೆಸಲಾಯಿತು.

ಅರಮನೆ ಆವರಣದಲ್ಲಿ 12 ಸಾವಿರ ಚದರ ಅಡಿ ಸ್ಥಳದಲ್ಲಿ ಮೈಸೂರಿನ  ಎಂಟು ಸರ್ಕಾರಿ ಪ್ರೌಢಶಾಲೆ ಹಾಗೂ ಹಾಗೂ ಕಾಲೇಜು ಸೇರಿದಂತೆ 33 ಶಾಲಾ ಕಾಲೇಜುಗಳ ಸುಮಾರು 6001 ವಿದ್ಯಾರ್ಥಿಗಳು ಲಾಂಗೆಸ್ಟ್ ಯೋಗ ಚೈನ್ ಪ್ರದರ್ಶನ ನೀಡುವ ಮೂಲಕ ಗಿನ್ನೆಸ್ ದಾಖಲೆ ಮಾಡಲು ಸಜ್ಜಾಗಿದ್ದು, ಶನಿವಾರ 4000 ವಿದ್ಯಾರ್ಥಿಗಳು ತಾಲೀಮು ನಡೆಸಿದರು. ಎಲ್ಲ ವಿದ್ಯಾರ್ಥಿಗಳಿಗೂ ಮೊದಲೇ ಮ್ಯಾಟ್ ಅಥವಾ ಜಮಖಾನಾ ತರಲು ಸೂಚಿಸಲಾಗಿದ್ದು, ತಾವು ತಂದ  ಮ್ಯಾಟ್ ಗಳಲ್ಲಿ ಕುಳಿತು ಯೋಗ ಪ್ರದರ್ಶನ ನೀಡಿದರು. ವಿದ್ಯಾರ್ಥಿಗಳಿಗೆ ಕುಡಿಯುವ ನೀರು, ಬಿಸ್ಕೆಟ್, ಬಾಳೆಹಣ್ಣು ವಿತರಿಸಲಾಯಿತು.

ಈ ಸಂದರ್ಭ ಜಿಲ್ಲಾಧಿಕಾರಿ ಡಿ.ರಂದೀಪ್, ಜಿಲ್ಲಾ ಯುವಜನ ಸಮನ್ವಯಾಧಿಕಾರಿ ಎಂ.ಎನ್.ನಟರಾಜ್, ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಜನಾರ್ದನ್, ಗಿನ್ನೆಸ್ ದಾಖಲೆ ಸಲಹೆಗಾರ್ತಿ ಶೈಲಜಾ, ಮೈಸೂರು ಟ್ರಾವೆಲ್ಸ್ ಅಸೋಸಿಯೇಷನ್ ಅಧ್ಯಕ್ಷ ಬಿ.ಎಸ್.ಪ್ರಶಾಂತ್, ಜಿಎಸ್ ಎಸ್ ಫೌಂಡೇಶನ್ ನ ಶ್ರೀಹರಿ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: