ಮೈಸೂರು

ಎನ್ಐಇಐಟಿಯಲ್ಲಿ ಭಗವದ್ಗೀತಾ ಸಂದೇಶ

ನಗರದ ಎನ್ಐಇಐಟಿ ಕಾಲೇಜಿನಲ್ಲಿ ಇತ್ತೀಚೆಗೆ ಭಗವದ್ಗೀತೆ ಸಂದೇಶ ತಿಳಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎನ್ಐಇ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ರಾಮತೀರ್ಥ ಮಾತನಾಡಿ ಭಗವದ್ಗೀತೆಯ ಮಹತ್ವವನ್ನು ತಿಳಿಸಿದರು. ವಿದ್ಯಾರ್ಥಿಗಳಿಗೆ ಗೀತೆಯ ಮಹತ್ವ ತಿಳಿಸಿ ಅವರನ್ನು ಧ್ಯಾನದಲ್ಲಿ ತೊಡಗಲು ಹೇಳಬೇಕು. ಈ ರೀತಿ ಮಾಡುವುದರಿಂದ ಜೀವನದಲ್ಲಿ ಶಾಂತಿ ಹಾಗೂ ಸಫಲತೆಯನ್ನು ಕಾಣಲು ಸಾಧ್ಯವಿದೆ ಎಂದರು. ವೇದಮೋಹನ್ ವಿ. ಮತ್ತು ಮಧು ಆರ್. ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎನ್ಐಇಐಟಿಯ ಪ್ರಾಂಶುಪಾಲ ಡಾ.ಟಿ. ಅನಂತ ಪದ್ಮನಾಭ, ಬೋಧಕ-ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

comments

Related Articles

error: