ಕರ್ನಾಟಕ

ಹೆಸ್ಕಾಂನಲ್ಲಿ ಕೆಲಸಕೊಡಿಸುವುದಾಗಿ ನಂಬಿಸಿ ಕೋಟ್ಯಾಂತರ ರೂ.ವಂಚಿಸಿದ್ದ ವ್ಯಕ್ತಿಯ ಬಂಧನ

ರಾಜ್ಯ(ಬೆಂಗಳೂರು)ಜೂ.17:- ಹೆಸ್ಕಾಂನಲ್ಲಿ ಕೆಲಸ ಕೊಡಿಸುತ್ತೇನೆ. ನಾನು ಇಂಧನ ಸಚಿವ ಡಿ.ಕೆ ಶಿವಕುಮಾರ್ ಅವರ ಅಭಿಮಾನಿ ಎಂದು ಹೇಳಿಕೊಂಡು ಕೋಟ್ಯಾಂತರ ರೂ.ವಂಚಿಸಿದ್ದ   ವ್ಯಕ್ತಿಯೋರ್ವ ಇದೀಗ ರಾಮದುರ್ಗ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಬಂಧಿತನನ್ನು ಅನ್ವರ್ ಜಮಾದರ್ ಎಂದು ಗುರುತಿಸಲಾಗಿದೆ. ಈತ ಹೆಸ್ಕಾಂನ ಲೈನ್ ಮೆನ್ ಸೇರಿದಂತೆ  ವಿವಿಧ ಹುದ್ದಗಳಲ್ಲಿ  ನಿರುದ್ಯೋಗಿಗಳಿಗೆ ಕೆಲಸ ಕೊಡಿಸುವುದಾಗಿ ನಂಬಿಸಿ 30ಕ್ಕೂ ಹೆಚ್ಚು ಜನರ ಬಳಿ ಕೋಟ್ಯಾಂತರ ರೂಪಾಯಿ ಪಡೆದಿದ್ದ ಎನ್ನಲಾಗಿದೆ. ಅಷ್ಟೇ ಅಲ್ಲದೇ ಈತ  ಡಿ.ಕೆ ಶಿವಕುಮಾರ್ ಅಭಿಮಾನಿ ಸಂಘದ ಮಾಜಿ ಜಿಲ್ಲಾಧ್ಯಕ್ಷ ಎಂದು ಹೇಳಲಾಗುತ್ತಿದೆ.  ಹಣ ವಾಪಸ್ ಕೇಳಿದಾಗ ಈತ ತಲೆಮರಿಸಿಕೊಂಡಿದ್ದು,ಬೆಳಗಾವಿ ಅಧಿವೇಶನದ ವೇಳೆ ಹಣ ಕಳೆದುಕೊಂಡವರು ಇದನ್ನು ಸಚಿವರ ಗಮನಕ್ಕೆ ತಂದಿದ್ದರು.  ಹನುಮಂತ ಎಂಬ ವ್ಯಕ್ತಿ ದೂರನ್ನು ನೀಡಿದ್ದರು. ರಾಮದುರ್ಗ ಪೊಲೀಸರು  ಅನ್ವರ್ ಜಮಾದರ್ ನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: