
ಮೈಸೂರು
ನೆರೆಮನೆಯವರ ಅನುಮಾನಕ್ಕೆ ಯುವತಿ ಬಲಿ
ಮೈಸೂರು,ಜೂ.17:- ಪಕ್ಕದ ಮನೆಯ ಮಹಿಳೆ ತನ್ನ ಕುರಿತು ಅನುಮಾನಪಟ್ಟಳು ಎಂಬ ಕಾರಣಕ್ಕೆ ಯುವತಿಯೋರ್ವಳು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಆಕೆ ಶನಿವಾರ ಮೃತಪಟ್ಟ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ಎನ್.ಆರ್.ಮೊಹಲ್ಲಾ ಕುರಿಮಂಡಿ ನಿವಾಸಿ ಸರಸ್ವತಿ(28) ಮೃತ ದುರ್ದೈವಿ. ಈಕೆಯ ಪಕ್ಕದ ಮನೆಯ ಲಕ್ಷ್ಮಿಎಂಬವರು ತನ್ನ ಗಂಡ ಶಿವಣ್ಣ ಜೊತೆ ಸರಸ್ವತಿಗೆ ಅನೈತಿಕ ಸಂಬಂಧವಿದೆ ಎಂಬ ಅನುಮಾನ ವ್ಯಕ್ತಪಡಿಸಿದ್ದಳು ಅಷ್ಟೇ ಅಲ್ಲದೇ ಜಗಳಕ್ಕಿಳಿದಿದ್ದಳು. ಇದರಿಂದ ಮನನೊಂದ ಸರಸ್ವತಿ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದಳು. ಕೆ.ಆರ್.ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸರಸ್ವತಿ ಸಾವನ್ನಪ್ಪಿದ್ದಾಳೆ. ಸರಸ್ವತಿ ಕುಟುಂಬಿಕರು ಎನ್.ಆರ್.ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. (ಕೆ.ಎಸ್,ಎಸ್.ಎಚ್)