ಮೈಸೂರು

ಚಾಮರಾಜ ಕ್ಷೇತ್ರದ ಪ್ರಗತಿ ಪರಿಶೀಲನಾ ಸಭೆ : ಜನರ ಸಮಸ್ಯೆಗಳಿಗೆ ಸ್ಪಂದಿಸಲು ಅಧಿಕಾರಿಗಳಿಗೆ ಶಾಸಕ ವಾಸು ಸೂಚನೆ

ಮೈಸೂರು.ಜೂ.17:-  ನಗರದ  ವಾಣಿ ವಿಲಾಸ ನೀರು ಸರಬರಾಜು ಕೇಂದ್ರದ ಸಭಾಂಗಣದಲ್ಲಿ ಚಾಮರಾಜ ಕ್ಷೇತ್ರದ ಶಾಸಕ ಪಿ. ವಾಸು ಅಧ್ಯಕ್ಷತೆಯಲ್ಲಿ ಚಾಮರಾಜ ಕ್ಷೇತ್ರದ ಪ್ರಗತಿ ಪರಿಶೀಲನಾ ಸಭೆ ನಡೆಯಿತು.

ಸಭೆಯಲ್ಲಿ ಶಾಸಕ ಪಿ. ವಾಸು ರಸ್ತೆ ಅಭಿವೃದ್ಧಿ, ಕುಡಿಯುವ ನೀರು, ಪರಿಸರ ಕಾಳಜಿ ಕುರಿತಂತೆ ಯಾವ ರೀತಿ ಕ್ರಮಗಳನ್ನು ಕೈಗೊಳ್ಳುತ್ತೀದ್ದೀರಿ ಎಂದು ತನ್ನ ವ್ಯಾಪ್ತಿಗೆ ಬರುವ 22 ವಾರ್ಡ್ ಗಳ ಅಧಿಕಾರಿಗಳನ್ನು ಪ್ರಶ್ನಿಸಿದರು. ಅಧಿಕಾರಿಗಳಿಂದ  ಸಮಂಜಸ ಉತ್ತರ ಪಡೆದ ನಂತರ ಜನರಿಗೆ ಸಮಸ್ಯೆಗಳಿವೆಯೇ ಎಂದು ವಿಚಾರಿಸಿಕೊಳ್ಳಿ, ರಸ್ತೆ ಅಭಿವೃದ್ಧಿ ಜನರಿಗೆ ಪೂರಕವಾಗಿದೆಯೇ ಇಲ್ಲವೇ ಎಂಬುದ ಮಾಹಿತಿಯನ್ನು ಸಂಗ್ರಹಿಸಿಕೊಳ್ಳಿ ಎಂದು ತಿಳಿಸಿದರು.

ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಾಗಿರುವುದು ನಮ್ಮ ಕರ್ತವ್ಯವಾಗಿರುವುದರಿಂದ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಹೆಚ್ಚಿನ ಮುತುವರ್ಜಿವಹಿಸಿ ಎಂದು ತಿಳಿಸಿದರು. ಈ ಸಂದರ್ಭ ವಲಯಾಧಿಕಾರಿಗಳು, ನರ್ಮ್ ಯೋಜನಾಧಿಕಾರಿಗಳು, ಸುರೇಶ್ ಬಾಬು, ಆಯುಕ್ತ ಜಿ,ಜಗದೀಶ್ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: