ಮೈಸೂರು

ಎಬಿಎಸ್ ಫೌಂಡೇಷನ್ ನಿಂದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

ಮೈಸೂರು,ಜೂ.17-ಎಬಿಎಸ್ ಫೌಂಡೇಷನ್ ವತಿಯಿಂದ ಸುಮಾರು 10 ಸಾವಿರ ಮಂದಿ ವಿದ್ಯಾರ್ಥಿಗಳಿಗೆ ಪುಸ್ತಕ, ಶಾಲಾ ಬ್ಯಾಗ್, ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು.

ನಗರದ ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿರುವ ಎಬಿಎಸ್ ಇಂಟರ್ ನ್ಯಾಷನಲ್ ಹೋಟೆಲ್ ನಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಿ.ಧ್ರುವಕುಮಾರ್ ವಿದ್ಯಾರ್ಥಿಗಳಿಗೆ ವಿತರಿಸಿದರು.

ಎಬಿಎಸ್ ಫೌಂಡೇಷನ್ ನವರು ಕಳೆದ 10 ವರ್ಷಗಳಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಈ ರೀತಿ ಪುಸ್ತಕಗಳನ್ನು ವಿತರಿಸುತ್ತಾ ಬಂದಿದ್ದಾರೆ.

ಈ ಸಂದರ್ಭದಲ್ಲಿ ಜೆಡಿಎಸ್ ನಗರಾಧ್ಯಕ್ಷ ಕೆ.ಹರೀಶ್ ಗೌಡ, ಫೌಂಡೇಷನ್ ಅಧ್ಯಕ್ಷರಾದ ಸೈಯದ್ ಅಬ್ಬಾಸ್, ಬನ್ನೂರು ಕುಮಾರ್, ಕಾರ್ಯದರ್ಶಿ ಬನ್ನೂರು ಕುಮಾರ್, ನಗರಪಾಲಿಕೆ ಸದಸ್ಯರಾದ ಡಿ.ನಾಗಭೂಷಣ್, ಈಯಾಜ್ ಪಾಷ (ಪಾಂಡು), ಸುಹೇಲ್ ಬೇಗ್, ಅಜಿಜ್ ಸೇಠ್ ಬ್ಲಾಕ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಅಬ್ದುಲ್ ಖಾಧರ್, ಸೈಯದ್ ಇತರರು ಉಪಸ್ಥಿತರಿದ್ದರು. (ವರದಿ- ಎಚ್.ಎನ್.,ಎಂ.ಎನ್)

Leave a Reply

comments

Related Articles

error: