ಕರ್ನಾಟಕಪ್ರಮುಖ ಸುದ್ದಿ

ಶೇ.10 ರಷ್ಟು ಮೆಟ್ರೋ ಪ್ರಯಾಣ ದರ ಏರಿಕೆ

ಬೆಂಗಳೂರು, ಜು.17 : ನಮ್ಮ ಮೆಟ್ರೊ ಮೊದಲ ಹಂತದ ಎಲ್ಲಾ ಮಾರ್ಗಗಳು ನಾಳೆಯಿಂದ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗುತ್ತಿದ್ದು, ಪ್ರಯಾಣದರವನ್ನು ಶೇಕಡಾ 10ರಷ್ಟು ಹೆಚ್ಚಿಸಲು ಬೆಂಗಳೂರು ಮೆಟ್ರೊ ರೈಲು ನಿಗಮ ನಿರ್ಧರಿಸಿದೆ. ಹಾಲಿ ಇರುವ ಮೆಟ್ರೋ ರೈಲು ಪ್ರಯಾಣ ದರದಲ್ಲಿ ಶೇ.10 ರಿಂದ 12 ರವರೆಗೂ ದರ ಏರಿಕೆಯಾಗುವ ಸಾಧ್ಯತೆ ಇದೆ.

ಮೆಟ್ರೊ ಕಾರ್ಯಾಚರಣೆಯಿಂದ ಇದುವರೆಗೆ ಉಂಟಾಗಿರುವ ನಷ್ಟವನ್ನು ಸರಿದೂಗಿಸುವ ಸಲುವಾಗಿ ಮೊದಲ ಹಂತದ ಎಲ್ಲ ಮಾರ್ಗಗಳಲ್ಲೂ ಶೇ.10ರಷ್ಟು ದರ ಏರಿಕೆ ಮಾಡಲಾಗುತ್ತಿದೆ ಎಂದು ಬಿಎಂಆರ್‍ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ. ದರ ಏರಿಕೆ ಕುರಿತ ಬಿಎಂಆರ್‍ಸಿಎಲ್ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಕೂಡ ಒಪ್ಪಿಗೆ ನೀಡಿದೆ ಸಿಎಂ ಕಚೇರಿಯ ಮೂಲಗಳು ತಿಳಿಸಿವೆ.

ಸೂಕ್ತ ಸಮಯದಲ್ಲೇ ಪ್ರಯಾಣದರ ಪರಿಷ್ಕರಣೆ ಮಾಡಲಾಗುತ್ತಿದೆ. ಪ್ರಯಾಣಿಕರಿಗೆ ಇದು ಹೊರೆಯಾಗದು. 2011ರಲ್ಲಿ ನಿಗದಿಪಡಿಸಿರುವ ದರವೇ ಈಗಲೂ ಚಾಲ್ತಿಯಲ್ಲಿದೆ. ಈ ಅವಧಿಯಲ್ಲಿ ಕಾರ್ಯಾಚರಣೆ ವೆಚ್ಚದಲ್ಲಿ ಭಾರಿ ಹೆಚ್ಚಳ ಆಗಿದೆ. ರಾಜ್ಯ ಸರ್ಕಾರ ವರ್ಷಕ್ಕೆ ರು.276 ಕೋಟಿಯಷ್ಟು ನಷ್ಟವನ್ನು ಭರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಪ್ರಯಾಣದರ ಹೆಚ್ಚಳ  ಅನಿವಾರ್ಯ ಎಂದು ಹೇಳಿದ್ದಾರೆ ಬಿಎಂಆರ್‍ಸಿಎಲ್ ಅಧಿಕಾರಿಗಳು ದರ ಹೆಚ್ಚಳಕ್ಕೆ ಸಮರ್ಥನೆ ನೀಡಿದ್ದಾರೆ.

ಎನ್.ಬಿ.

Leave a Reply

comments

Related Articles

error: