ಪ್ರಮುಖ ಸುದ್ದಿಮೈಸೂರು

ಸಿಎಂ ಸಿದ್ದರಾಮಯ್ಯ ಅವರಿಂದ ಏಕಲವ್ಯ ಪ್ರಶಸ್ತಿ ಪ್ರದಾನ

ಕ್ರೀಡಾ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಸಲ್ಲಿಸಿದ 16 ಮಂದಿಗೆ 2015ರ ಏಕಲವ್ಯ ಪ್ರಶಸ್ತಿ, 10 ಮಂದಿಗೆ ಕ್ರೀಡಾರತ್ನ ಹಾಗೂ ಇಬ್ಬರಿಗೆ ಜೀವಮಾನದ ಸಾಧನೆ  ಪ್ರಶಸ್ತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರದಾನ ಮಾಡಿದರು.

ಶುಕ್ರವಾರ ನಗರದ ಜೆಕೆ ಮೈದಾನದಲ್ಲಿರುವ ಅಮೃತೋತ್ಸವ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಜೇತರಿಗೆ ನಗದು ಬಹುಮಾನ, ಪ್ರಶಸ್ತಿ ಪತ್ರ, ಕಂಚಿನ ಪದಕ ನೀಡಿ ಗೌರವಿಸಿದರು. ಬಳಿಕ ಮಾತನಾಡಿದ ಅವರು, ಮತೀಯತೆ, ಜಾತೀಯತೆ ಇಲ್ಲದ ಧರ್ಮಾತೀತ, ಜಾತ್ಯಾತೀತ ಕ್ಷೇತ್ರ ಯಾವುದಾದರು ಇದ್ದರೆ ಅದು ಕ್ರೀಡಾ ಕ್ಷೇತ್ರ ಮಾತ್ರ. ಕ್ರೀಡಾಪಟುಗಳು ಪರಸ್ಪರ ಪ್ರೀತಿಯಿಂದ, ವಿಶ್ವಾಸದಿಂದ, ದೇಶ ದೇಶಗಳ ನಡುವೆ, ರಾಜ್ಯ ರಾಜ್ಯಗಳ ನಡುವೆ ಬೆಸುಗೆ ಬೆಸೆಯುತ್ತಾರೆ. ಅಂತಹ ಕ್ರೀಡಾ ಕ್ಷೇತ್ರವನ್ನು ಬಲಗೊಳಿಸಲು, ಮತ್ತಷ್ಟು ಅಭಿವೃದ್ಧಿ ಪಡಿಸಿ ಉನ್ನತೀಕರಿಸಲು ರಾಜ್ಯ ಸದಾ ಬದ್ಧ ಎಂದು ತಿಳಿಸಿದರು.

ಏಕಲವ್ಯ ಪ್ರಶಸ್ತಿಗೆ ದಾಮಿನಿ ಕೆ. ಗೌಡ, ವಿದ್ಯಾ ಪಿಳೈ, ಪವನ್ ಶೆಟ್ಟಿ, ನಿತಿನ್ ತಿಮ್ಮಯ್ಯ, ರಾಜಗುರು ಎನ್., ಕೃಷ್ಣ ಎ.ನಾಯ್ಕೊಡಿ, ಅರವಿಂದ ಎ., ಅರ್ಪಿತಾ ಎಂ., ಮೊಹಮದ್ ರಫೀಕ್ ಹೋಳಿ, ಮೇಘನ ಎಂ ಸಜ್ಜನರ್, ಧೃತಿ ತಾತಾಚಾರ್ ವೇಣುಗೋಪಾಲ್, ಅನುಪ್ ಡಿ ಕೋಸ್ಟ, ಜೆ.ಎಂ.ನಿಶ್ಚಿತಾ, ಶಾವದ್ ಜೆ.ಎಂ, ಉಮೇಶ್ ಆರ್ ಖಾಡೆ, ಕಂಚನ್ ಮುನ್ನೋಳ್‌ಕರ್ ಭಾಜನರಾದರು.

ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿಗೆ ಡಿ.ಎನ್.ರುದ್ರಸ್ವಾಮಿ, ಪೂರ್ಣಿಮಾ ವಿ., ಅಮೋಘ ಯು.ಚಚಡಿ, ರಂಜಿತ ಎಂ.ಪಿ., ಪ್ರದೀಪ್ ಕೆ.ಸಿ., ಸುಮಿತಾ ಯು.ಎಂ., ಡಾ.ಜೀವಂಧರ್ ಬಲ್ಲಾಳ್, ಆನಂದ್ ಇರ್ವತ್ತೂರು, ಆನಂದ್ ಎಲ್, ಮೋಶಪ್ಪ ವಿಠಪ್ಪ ಗುಳಬಾಳ,

ಜೀವಮಾನ ಸಾಧನೆ ಪ್ರಶಸ್ತಿಗೆ ಜಾನ್ ಕ್ರಿಸ್ಟೋಫರ್ ನಿರ್ಮಲ್ ಕುಮಾರ್, ಶಿವಾನಂದ್ ಆರ್. ಭಾಜನರಾದರು.

ಏಕಲವ್ಯ ಪ್ರಶಸ್ತಿಗೆ ಭಾಜನರಾದವರಿಗೆ 2 ಲಕ್ಷ ರು. ನಗದು, ಸ್ಕ್ರೋಲ್, ಏಕಲವ್ಯನ ಕಂಚಿನ ವಿಗ್ರಹ, ಕ್ರೀಡಾ ರತ್ನ ಪ್ರಶಸ್ತಿಗೆ ಭಾಜನರಾದವರಿಗೆ ತಲಾ 1 ಲಕ್ಷ ರು. ನಗದು, ಪ್ರಶಸ್ತಿ ಪತ್ರ ಮತ್ತು ಪ್ರಶಸ್ತಿ ಫಲಕ,  ಜೀವಮಾನ ಸಾಧನೆ ಪ್ರಶಸ್ತಿಗೆ ಭಾಜನರಾದವರಿಗೆ ತಲಾ 1.5 ಲಕ್ಷ ರು. ನಗದು, ಪ್ರಶಸ್ತಿ ಪತ್ರ ಮತ್ತು ಪ್ರಶಸ್ತಿ ಫಲಕ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ. ಮಹದೇವಪ್ಪ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್, ಶಾಸಕರಾದ ವಾಸು, ಸೋಮಶೇಖರ್, ಮೇಯರ್ ಬಿ.ಎಲ್. ಭೈರಪ್ಪ, ವಿಧಾನ ಪರಿಷತ್  ಸದಸ್ಯ ಗೋವಿಂದ ರಾಜ್ ಜಿಲ್ಲಾಧಿಕಾರಿ ರಂದೀಪ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

Leave a Reply

comments

Related Articles

error: