ದೇಶಪ್ರಮುಖ ಸುದ್ದಿ

ರಾಷ್ಟ್ರಪತಿ ಆಯ್ಕೆ : ಎಐಎಡಿಎಂಕೆ ಅಮ್ಮ ಬಣದಿಂದ ಬಿಜೆಪಿಗೆ ಬೆಂಬಲ

ನವದೆಹಲಿ/ಚೆನ್ನೈ, ಜೂ.17 : ರಾಷ್ಟ್ರಪತಿ ಚುನಾವಣೆ ಸಮೀಪಿಸುತ್ತಿದ್ದು, ಎನ್‍ಡಿಎ ಪರವಾಗಿ ಬಿಜೆಪಿ ಮತ್ತು ಮತ್ತು ವಿರೋಧ ಪಕ್ಷಗಳ ಸಾಲಿನಲ್ಲಿ ಕಾಂಗ್ರೆಸ್‍ ಮತ್ತು ಇತರ ಪಕ್ಷಗಳ ಚಟುವಟಿಕೆಗಳು ಬಿರುಸುಗೊಂಡಿವೆ.

ತಮಿಳುನಾಡಿನ ಎರಡು ಪ್ರಮುಖ ಪಕ್ಷಗಳಲ್ಲಿ ಮೊದಲಿನಿಂದಲೂ ಎಐಎಡಿಎಂಕೆ ಪಕ್ಷವು ಜಯಲಲಿತಾ ಅವರಿದ್ದ ಕಾಲದಿಂದಲೂ ಬಿಜೆಪಿಗೆ ಬೆಂಬಲಿಸಿಕೊಂಡು ಬಂದಿದ್ದು, ಅಂತೆಯೇ ಈಗ ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ಅವರ ಬಣ ಬಿಜೆಪಿಗೆ ಬೆಂಬಲಿಸಿದೆ. ಅಣ್ಣಾಡಿಎಂಕೆ ಅಮ್ಮ ಬಣವು 38 ಸಂಸದರು ಮತ್ತು 124 ಶಾಸಕರನ್ನು ಹೊಂದಿದ್ದು, ಬಿಜೆಪಿಗೆ ಬೆಂಬಲ ಘೋಷಿಸಿದೆ.

ಇದೇ ಪಕ್ಷದ ಮತ್ತೊಂದು ಬಣವಾದ ಮಾಜಿ ಮುಖ್ಯಮಂತ್ರಿ ಓ. ಪನ್ವೀರ್ ಸೆಲ್ವಂ ನೇತೃತ್ವದ ಬಣವೂ ಎನ್‍ಡಿಎಗೆ ಬೆಂಬಲ ಪ್ರಕಟಿಸಿದೆ. 12 ಸಂಸದರು ಮತ್ತು 11 ಶಾಸಕರು ಈ ಗುಂಪಿನಲ್ಲಿದ್ದಾರೆ.

ಈ ಬಾರಿ ಆಡಳಿತಾ ರೂಢ ಎನ್‍ಡಿಎ ಒಕ್ಕೂಟಕ್ಕೆ ರಾಷ್ಟ್ರಪತಿ ಚುನಾವಣೆಯಲ್ಲಿ ಗೆಲ್ಲಲು ಬಹುಮತಕ್ಕೆ ಸ್ವಲ್ಪವೇ ಸ್ವಲ್ಪ ಮತಗಳ ಕೊರತೆ ಬೀಳಲಿದ್ದು, ಒಮ್ಮತದ ಅಭ್ಯರ್ಥಿ ಆಯ್ಕೆಗಾಗಿ ಬಿಜೆಪಿಯು ಪ್ರಾದೇಶಿಕ ಪಕ್ಷಗಳ ಮನವೊಲಿಕೆ ಪ್ರಯತ್ನ ನಡೆಸುತ್ತಿದೆ.

ಜೂ. 20 ರಂದು ರಾಷ್ಟ್ರಪತಿ ಹುದ್ದೆಗೆ ತನ್ನ ಅಭ್ಯರ್ಥಿಯನ್ನು ಪ್ರಕಟಿಸುವುದಾಗಿ ಬಿಜೆಪಿ ನೇತೃತ್ವದ ಎನ್‍ಡಿಎ ಹೇಳಿದೆ.

-ಎನ್.ಬಿ.

Leave a Reply

comments

Related Articles

error: