ಸುದ್ದಿ ಸಂಕ್ಷಿಪ್ತ

ಜೂ.20 ರಿಂದ ಸಂಜೀವಿನಿ ಯೋಗ ಶಿಬಿರ

ಮೈಸೂರು,ಜೂ.17-ಶ್ರೀ ಯೋಗ ಪರಮಹಂಸ ಯೋಗ ಮಹಾವಿದ್ಯಾಲಯದ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಸಂಜೀವಿನಿ ಯೋಗ ಶಿಬಿರವನ್ನು ಜೂ.20 ರಿಂದ 30 ರವರೆಗೆ ಸಂಜೆ 6.30 ರಿಂದ 8 ರವರೆಗೆ ಆಯೋಜಿಸಲಾಗಿದೆ.

ಯೋಗ ಪ್ರವೀಣ ಶಿವಪ್ರಕಾಶ್ ಗುರೂಜಿ ಮತ್ತು ವಿಶೇಷ ತರಬೇತುದಾರರಾದ ಯೋಗರತ್ನ ಮುಕುಂದನ್ ಅವರ ಮಾರ್ಗದರ್ಶನದಲ್ಲಿ ಶಿಬಿರವು ಮೀನಾಕ್ಷಿ ನಂ.12/ಎ, 1ನೇ ಹಂತ, 4ನೇ ಹಂತ, ಟಿ.ಕೆ.ಲೇಔಟ್, ಕಾಮಾಕ್ಷಿ ಆಸ್ಪತ್ರೆ ಹತ್ತಿರ, ಮೈಸೂರು-09 ಇಲ್ಲಿ ನಡೆಯಲಿದೆ.

ಶಿಬಿರದಲ್ಲಿ ಪ್ರಾಣಯಾಮ, ಮುದ್ರಾ, ಧಾನ್ಯ, ವಿಶ್ರಾಂತಿ ಚಿಕಿತ್ಸೆ, ಆಹಾರ ಕ್ರಮ, ಮಾತಿನ ಕಲೆ, ಚಿಕಿತ್ಸೆ, ಆಹಾರ ಕ್ರಮ, ಮಾತಿನ ಕಲೆ, ಚಿಕಿತ್ಸೆ ಮತ್ತು ಜೀವನ ಕಲೆ ಶಿಕ್ಷಣವನ್ನು ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಮೊ.ಸಂ. 9980569117, 99027173536 ಸಂಪರ್ಕಿಸಬಹುದು. (ವರದಿ-ಎಂ.ಎನ್)

Leave a Reply

comments

Related Articles

error: