ಸುದ್ದಿ ಸಂಕ್ಷಿಪ್ತ

ಜೂ.19 ರಿಂದ `ಸಮಗ್ರ ಜಲಸಂಪನ್ಮೂಲ ನಿರ್ವಹಣೆ’ ಕಾರ್ಯಕ್ರಮ

ಮೈಸೂರು,ಜೂ.17-ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ನ ಅಂಗಸಂಸ್ಥೆಯಾದ, ವಿವೇಕಾನಂದ ಇನ್ಸಿಟ್ಯೂಟ್ ಫಾರ್ ಲೀಡರ್ ಶಿಪ್ ಡೆವಲಫ್ ಮೆಂಟ್ ನಡೆಸುತ್ತಿರುವ ವ್ಯವಸ್ಥಾಪನಾ ಅಭಿವೃದ್ಧಿ ಕಾರ್ಯಕ್ರಮ (ಎಂಡಿಪಿ) ವತಿಯಿಂದ ಕರ್ನಾಟಕ ಸರ್ಕಾರದ ಅಭಿಯಂತರರಿಗಾಗಿ `ಸಮಗ್ರ ಜಲಸಂಪನ್ಮೂಲ ನಿರ್ವಹಣೆ’ ಕಾರ್ಯಕ್ರಮವನ್ನು ಜೂ.19 ರಿಂದ ಜುಲೈ 1 ರವರೆಗೆ ವಿ-ಲೀಡ್ ಕ್ಯಾಂಪಸ್ ನಲ್ಲಿ ಆಯೋಜಿಸಲಾಗಿದೆ.

ಎರಡು ವಾರದ ವಸತಿ ಸಹಿತ ಈ ತರಬೇತಿಯ ಮುಖ್ಯ ಉದ್ದೇಶ ಜಲ ಸಂಪನ್ಮೂಲ ನಿರ್ವಹಣೆಗಾಗಿ ಜ್ಞಾನವನ್ನು ಹೆಚ್ಚಿಸುವುದು. ಭಾರತ ಅದರಲ್ಲೂ ರಾಜ್ಯ ಎದುರಿಸುತ್ತಿರುವ ಸವಾಲುಗಳನ್ನು ಎದುರಿಸಲು ಅಭಿಯಂತರರುಗಳನ್ನು ತಯಾರು ಮಾಡುವುದಾಗಿದೆ.

ಜೂ.19 ರಂದು ಬೆಳಿಗ್ಗೆ 10.45 ಉದ್ಘಾಟನಾ ಕಾರ್ಯಕ್ರಮವನ್ನು ವಿ-ಲೀಡ್ ನಲ್ಲಿ  ಆಯೋಜಿಸಲಾಗಿದ್ದು, ಜಲ ಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಬಿ.ಜಿ.ಗುರುಪಾದಸ್ವಾಮಿ, ಎಸಿಐಡಬ್ಲ್ಯೂಆರ್ ಎಂ ರಿಜಿಸ್ಟ್ರಾರ್ ಮಾಧವ, ತಾಂತ್ರಿಕ ವಿಭಾಗದ ನಿರ್ದೇಶಕ ಡಾ.ಪಿ.ಸೋಮಶೇಖರ್ ರಾವ್ ಭಾಗವಹಿಸಲಿದ್ದು, ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ನ ಸಂಸ್ಥಾಪಕ ಅಧ್ಯಕ್ಷ ಡಾ.ಆರ್.ಬಾಲಸುಬ್ರಮಣ್ಯಮ್ ಅಧ್ಯಕ್ಷತೆ ವಹಿಸಲಿದ್ದಾರೆ. (ವರದಿ-ಎಂ.ಎನ್)

Leave a Reply

comments

Related Articles

error: