ಮೈಸೂರು

ಪ್ರೇಕ್ಷಕರನ್ನು ಭಾವಪರವಶಗೊಳಿಸಿದ ಜುಗಲ್ ಬಂದಿ

palace-2-webಜಗಮಗಿಸುವ ಬಣ್ಣಬಣ್ಣದ ವಿದ್ಯುದ್ದೀಪಾಲಂಕೃತ ಅರಮನೆ ಆವರಣದಲ್ಲಿ ಹರಿದ ಸಂಗೀತದ ಅಲೆ ಪ್ರೇಕ್ಷಕರ ಮನಃಪಟಲವನ್ನು ಯಶಸ್ವಿಯಾಗಿ ತಲುಪಿತ್ತು ಎನ್ನುವುದಕ್ಕೆ ಅವರು ನೀಡಿದ ಕರತಾಡನವೇ ಸಾಕ್ಷಿಯಾಗಿತ್ತು. ಕಣ್ಣು ಮತ್ತು ರೆಪ್ಪೆಗಳಂತೆ ಕೂಡಿಕೊಂಡಿರುವ ಸಾರಂಗಿ ಮತ್ತು ಸಿತಾರ್ ವಾದನಗಳ ಜುಗಲ್ ಬಂದಿ ಪ್ರೇಕ್ಷಕರನ್ನು ಭಾವಪರವಶಗೊಳಿಸುವಲ್ಲಿ ಯಶಸ್ವಿಯಾಗಿತ್ತು.

ಹೊಸದಿಲ್ಲಿಯ ಸೆವೆನ್ ಎಸೆನ್ಸ್ ತಂಡದ ಪಂಡಿತ್ ಮುರಾದ್ ಅಲಿಖಾನ್ ಮತ್ತು ಫತೇ ಅಲಿಖಾನ್  ಅವರ ಸಿತಾರ್ ಮತ್ತು ಸಾರಂಗಿ ಜುಗಲ್ ಬಂದಿ ಶ್ರೋತೃಗಳನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು. ಅವರಿಗೆ ತಬಲಾದಲ್ಲಿ ಉಸ್ತಾದ್ ಅಕ್ರಂ ಖಾನ್, ಹಾರ್ಮೋನಿಯಂನಲ್ಲಿ ಸುಹೇಗ್ ಹಸನ್, ಮೃದಂಗದಲ್ಲಿ ತುಮಕೂರಿನ ಬಿ.ರವಿಶಂಕರ ಸಾಥ್ ನೀಡಿದರು.

palace-3-web

ಜುಗಲ್ ಬಂದಿಗೂ ಮುನ್ನ ವಿದೂಷಿ ಮಹೂವಾ ಶಂಕರ್ ಅವರ ಕಥಕ್ ನೃತ್ಯ ಅಮೋಘವಾಗಿತ್ತು. ಮೈಸೂರಿನ ನೃತ್ಯಾಲಯದ ವತಿಯಿಂದ ಡಿವಿಜಿಯವರ ಕವನಕ್ಕೆ ಅಳವಡಿಸಲಾದ ನಟನವಾಡಿದಳ್ ತರುಣಿ ಕವನದ ಭರತನಾಟ್ಯ ವ್ಹಾವ್ ಎನ್ನುವ ಉದ್ಘಾರವನ್ನು ಹೊರಡಿಸಿತ್ತು.

Leave a Reply

comments

Related Articles

error: