ಮೈಸೂರು

ರಂಗಭೂಮಿ ಕಲಾವಿದೆ ಎಸ್. ಮಾಲತಿ ಅವರಿಗೆ ಸನ್ಮಾನ

ರಂಗಾಯಣದ ಭೂಮಿಗೀತದಲ್ಲಿ ಶುಕ್ರವಾರ ಸಂಜೆ ನಡೆದ ನವರಾತ್ರಿ ರಂಗೋತ್ಸವದಲ್ಲಿ ರಂಗಭೂಮಿ ಕಲಾವಿದೆ ಎಸ್. ಮಾಲತಿ ಅವರನ್ನು ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಎಸ್. ಮಾಲತಿ, ಜನರ ಸಾಂಪ್ರದಾಯಿಕ ಮನಸ್ಥಿತಿಯಿಂದ ರಂಗಭೂಮಿ ಮೇಲೆ ಆಸಕ್ತಿ ಕಡಿಮೆಯಾಗುತ್ತಿದೆ. ನಮ್ಮ ಆಸಕ್ತಿಯ ವಿಷಯದಲ್ಲಿ ಯಶಸ್ವಿಯಾಗಬೇಕೆಂದರೆ ಯಾವುದೇ ಅಡೆತಡೆಗಳು ಬಂದರೂ ಎದುರಿಸಬೇಕು ಎಂದು ಹೇಳಿದರು.

ಕರ್ನಾಟಕ ಪೊಲೀಸ್ ಅಕಾಡೆಮಿಯ ಉಪ ನಿರ್ದೇಶಕಿ ಧರಣಿದೇವಿ ಮಾಲಗತ್ತಿ ಮಾತನಾಡಿ, ವಿಭಿನ್ನ ಮನಸ್ಥಿತಿಯ ಜನರನ್ನು ಒಂದೆಡೆ ಸೇರಿಸಲು ರಂಗಭೂಮಿ ಉತ್ತಮ ವೇದಿಕೆಯಾಗಿದೆ. ಸಾಮಾಜಿಕ ಸಿದ್ಧಾಂತ ಮತ್ತು ತತ್ತ್ವಶಾಸ್ತ್ರಗಳನ್ನು ಪ್ರದರ್ಶಿಸಲು ನಾಟಕಗಳು ಸಹಕಾರಿಯಾಗಿವೆ ಎಂದರು.

ರಂಗಾಯಣದ ಉಪ ನಿರ್ದೇಶಕಿ ನಿರ್ಮಲಾ ಮಠಪತಿ, ಸಂಯೋಜಕ ವಿನಾಯಕ್ ಭಟ್, ಕೃಷ್ಣಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: