ಕ್ರೀಡೆಮೈಸೂರು

ಇಂಡೋ- ಥೈಲ್ಯಾಂಡ್ ಅಂತರ ರಾಷ್ಟ್ರೀಯ ಥ್ರೋಬಾಲ್ :ವ್ಯವಸ್ಥಾಪಕರಾಗಿ ಎನ್.ಎಸ್.ಸುಬ್ರಮಣ್ಯ

ಮೈಸೂರು,ಜೂ.18:-   ಥೈಲ್ಯಾಂಡ್ ದೇಶದ ಬ್ಯಾಂಕಾಕ್‍ನಲ್ಲಿ ಜೂ20 ರಿಂದ ಜೂ24ರ ವರೆಗೆ ಇಂಡೋ- ಥೈಲ್ಯಾಂಡ್ ಅಂತರ ರಾಷ್ಟ್ರೀಯ ಥ್ರೋಬಾಲ್ ಛಾಂಪಿಯನ್ ಶಿಪ್‍ನಲ್ಲಿ ಭಾಗವಹಿಸುತ್ತಿರುವ ಭಾರತ ಪುರುಷರ ಥ್ರೋಬಾಲ್ ತಂಡದ ವ್ಯವಸ್ಥಾಪಕರಾಗಿ ನಂಜನಗೂಡಿನ .ಎನ್.ಎಸ್.ಸುಬ್ರಮಣ್ಯ ರವರನ್ನು ಥ್ರೋಬಾಲ್ ಫೆಡರೇಷನ್ ಆಫ್ ಇಂಡಿಯಾ ನಿಯೋಜಿಸಿದೆ.
ಮೈಸೂರಿನ ಸೋಮಾನಿ ಬಿ.ಎಡ್.ಕಾಲೇಜ್ ನಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರಾಗಿರುವ ಇವರು ಈಹಿಂದೆ ಶ್ರೀಲಂಕ, ಮಲೇಷಿಯಾದಲ್ಲಿ ನಡೆದ ಪ್ರಥಮ ಏಶಿಯನ್  ಜೂನಿಯರ್ ಥ್ರೋಬಾಲ್ ಛಾಂಪಿಯನ್ ಶಿಪ್‍ನಲ್ಲಿ ಭಾರತದ ಬಾಲಕರ ತಂಡದ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸಿ ಈಎರಡು ಛಾಂಪಿಯನ್ ಶಿಪ್‍ಗಳಲ್ಲಿ ಭಾರತ ತಂಡ ಛಾಂಪಿಯನ್ ಶಿಪ್ ಗಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: