ಕರ್ನಾಟಕ

ಅತ್ಯಾಚಾರ ಆರೋಪಿಯ ಬಂಧನ

ರಾಜ್ಯ(ಮಂಡ್ಯ)ಜೂ.18:-  ಅತ್ಯಾಚಾರ ನಡೆಸಿದ ಆರೋಪಿಯನ್ನು ಆರು ತಿಂಗಳ ಬಳಿಕ ಬಂಧಿಸಿದ ಘಟನೆ ಮಂಡ್ಯದಲ್ಲಿ ನಡೆದಿದೆ.
ಬಂಧಿತನನ್ನು ಶ್ರೀರಂಗಪಟ್ಟಣ ತಾಲೂಕು ಹುಂಜನಕೆರೆ ಗ್ರಾಮದ ಸಂತೋಷ್(26) ಎಂದು ಗುರುತಿಸಲಾಗಿದೆ. ಕಳೆದ ಡಿಸೆಂಬರ್‌-12 ರಂದು ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ್ದ ಆರೋಪಿ ವಿರುದ್ದ ಪ್ರಕರಣ ದಾಖಲಾಗುತ್ತಿದ್ದಂತೆ  ಆರೋಪಿ ನಾಪತ್ತೆಯಾಗಿದ್ದ. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮಂಡ್ಯ ಪೊಲೀಸರ  ಕಾರ್ಯಾಚರಣೆಯಿಂದ ಆರೋಪಿಯನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಯನ್ನು‌ ಪೊಲೀಸರು  ನ್ಯಾಯಾಂಗ ಬಂಧನದ ವಶಕ್ಕೆ ನೀಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: