ಮೈಸೂರು

ಉಪಹಾರದ ಪ್ಲೇಟ್ ಕಸಿದು ಬಿಸಾಡಿ ಅಮಾನವೀಯವಾಗಿ ವರ್ತಿಸಿದ ಟಿಕೇಟ್ ಕಲೆಕ್ಟರ್

ಮೈಸೂರು,ಜೂ.18:- ಟಿಕೇಟ್ ಕಲೆಕ್ಟರ್ ಓರ್ವರು ಚಾಲಕ ಮತ್ತು ನಿರ್ವಾಹಕರು  ಉಪಹಾರ ಸೇವಿಸುತ್ತಿರುವಾಗ ಪ್ಲೇಟ್ ಕಸಿದು ಅಮಾನವೀಯವಾಗಿ ವರ್ತಿಸಿದ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ  ನಗರ ಬಸ್ ನಿಲ್ದಾಣದ ಕ್ಯಾಂಟೀನ್ ನಲ್ಲಿ ಭಾನುವಾರ ಬೆಳಿಗ್ಗೆ ಸಾತಗಳ್ಳಿ  ಡಿಪೋಕ್ಕೆ ಸೇರಿದ ಬಸ್ ನ ಚಾಲಕ ಕೆಂಪೇಗೌಡ ಉಪಹಾರ ಸೇವಿಸುತ್ತಿದ್ದರು. ಅವರ ಜೊತೆ  ನಿರ್ವಾಹಕರು ಇದ್ದರು. ಈ ಸಂದರ್ಭ ಸ್ಥಳಕ್ಕೆ ಬಂದ  ಟಿಕೇಟ್ ಕಲೆಕ್ಟರ್  ಶ್ರೀನಿವಾಸ್ ಸಮಯವಾಗಿದೆ ಬಸ್ ಬಿಡುವುದು ಯಾವಾಗ ಎಂದು ಪ್ರಶ್ನಿಸಿ  ಚಾಲಕನ ಕೈಯ್ಯಲ್ಲಿದ್ದ ಉಪಹಾರದ ತಟ್ಟೆಯನ್ನು ಎತ್ತಿ ಬಿಸಾಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಉಳಿದ ಚಾಲಕರು, ನಿರ್ವಾಹಕರು ಸ್ಥಳದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಡಿಪೋ ಮ್ಯಾನೇಜರ್ ಸ್ಥಳಕ್ಕಾಗಮಿಸಿದ್ದು, ಎಲ್ಲರನ್ನೂ ಸಮಾಧಾನ ಪಡಿಸುವ ಯತ್ನದಲ್ಲಿ ತೊಡಗಿದ್ದಾರೆ. ಬಸ್ ನಿಲ್ದಾಣದ ಎದುರು ಇದೀಗ ಚಾಲಕ ಕೆಂಪೇಗೌಡ ಓರ್ವರೇ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಸಂದರ್ಭ ಮಾತನಾಡಿದ ಅವರು ನನಗೆ ಆರೋಗ್ಯ ಸರಿಯಿಲ್ಲದ ಕಾರಣ ಉಪಹಾರ ಸೇವಿಸುತ್ತಿದ್ದೆ. ಆದರೆ ಟಿಕೇಟ್ ಕಲೆಕ್ಟರ್ ನನ್ನ ಜೊತೆ ಅಮಾನವೀಯವಾಗಿ ವರ್ತಿಸಿದ್ದಾರೆ, ನನ್ನಿಂದ ಉಳಿದವರ ಕೆಲಸಕ್ಕೆ ತೊದರೆಯಾಗುವುದು ಬೇಡ. ಉಳಿದವರು ಕೆಲಸ ನಿರ್ವಹಿಸಿ. ನಾನೊಬ್ಬನೇ ಹೋರಾಡುತ್ತೇನೆ ಎಂದು ಪಟ್ಟು ಹಿಡಿದು ಒಬ್ಬರೇ ಪ್ರತಿಭಟನೆ ನಡೆಸುತ್ತಿದ್ದಾರೆ.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: