ಲೈಫ್ & ಸ್ಟೈಲ್

ವಾಹನ ಚಾಲನಾ ನಿಯಮ: ಪೊಲೀಸರಿಗಿಂತ ಪೋಷಕರ ಮಾತು ಪರಿಣಾಮಕಾರಿ

ಹದಿ ಹರೆಯದ ವಯಸ್ಸಿನವರು ವಾಹನ ಚಾಲನೆ ಮಾಡುವಾಗ ಪೊಲೀಸರು ನೀಡುವ ಸಲಹೆ ಸೂಚನೆಗಳ ಕಡೆ ಗಮನ ಕೊಡುವುದು ಕಡಿಮೆ. ಇಂತಹ ಸಂದರ್ಭ ಸಂಚಾರಿ ನಿಯಮಗಳ ಕುರಿತು ಪೋಷಕರು ಹೇಳುವ ಮಾತುಗಳು ಹೆಚ್ಚು ಪರಿಣಾಮಕಾರಿ ಎಂದು ಅಧ್ಯಯನ ವರದಿಗಳು ಹೇಳಿವೆ.

ಈ ಬಗ್ಗೆ ಆಸ್ಟ್ರೇಲಿಯಾದ ಕ್ವೀನ್ಸ್^ಲ್ಯಾಂಡ್ ಯುನಿವರ್ಸಿಟಿ ನಡೆಸಿದ ಅಧ್ಯಯನದಲ್ಲಿ ಈ ವಿಷಯಕ್ಕೆ ಪುಷ್ಟಿ ನೀಡುವ ಅಂಶಗಳು ಕಂಡುಬಂದಿದ್ದು, ಮಕ್ಕಳು ವಾಹನ ಚಲಾಯಿಸುವ ವೇಳೆ ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸದೆ ಇದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುವುದನ್ನು ಮನವರಿಕೆ ಮಾಡಿಕೊಡುವಲ್ಲಿ ಪೋಷಕರು ಸದಾ ಪ್ರಯತ್ನಿಸುತ್ತಿರುತ್ತಾರೆ. ಕುಡಿದು ವಾಹನ ಚಲಾಯಿಸುವುದು ಹಾಗೂ ವಾಹನ ಚಲಾಯಿಸುವಾಗ ಮೊಬೈಲ್ ಉಪಯೋಗಿಸುವುದನ್ನು ಪೋಷಕರು ವಿರೋಧಿಸುತ್ತಾರೆ. ಸಂಚಾರಿ ನಿಯಮಗಳ ಉಲ್ಲಂಘನೆ ಕುರಿತು ಪೋಷಕರು ನೀಡುವ ತಿಳುವಳಿಕೆ ಹಾಗೂ ಎಚ್ಚರಿಕೆ ಪೊಲೀಸರು ನೀಡುವ ಸಲಹೆ ಸೂಚನೆಗಳಿಗಿಂತ ಹೆಚ್ಚು ಪರಿಣಾಮಕಾರಿ ಎಂದಿವೆ.

ಸಂಶೋಧನೆಯ ಪ್ರಕಾರ ಹೊಸದಾಗಿ ವಾಹನ ಚಾಲನೆ ಲೈಸನ್ಸ್ ಪಡೆದವರು ಒಂದಕ್ಕಿಂತ ಹೆಚ್ಚಿನ ಅಪಘಾತಗಳನ್ನು ಎಸಗಿ ಸಾವಿಗೂ ಈಡಾಗಿದ್ದಾರೆ. ಎಷ್ಟೋ ಮಕ್ಕಳು ಪೋಷಕರ ಅತಿಯಾದ ಕಾಳಜಿಯಿಂದಾಗಿ ವಾಹನ ಚಲಾಯಿಸುವ ವೇಳೆಯಲ್ಲಿ ರಸ್ತೆ ಸಂಚಾರಿ ನಿಯಮ ಹಾಗೂ ಕಾನೂನು ಉಲ್ಲಂಘಿಸಿ  ಅಸುರಕ್ಷತೆಯಿಂದ ವಾಹನ ಚಲಾಯಿಸುವ ಸಾಧ್ಯಗಳೂ ಇವೆ ಎಂದು ಸಂಶೋಧಕ  ಅಲೆಕ್ಸಿಯಾ ಲೆನೋನ್ ತಿಳಿಸಿದ್ದಾರೆ. ಆದರೂ ನಿಯಮಾನುಸಾರ ವಾಹನ ಚಲಾಯಿಸುವ ಬಗ್ಗೆ ಪೋಷಕರು ಹೇಳುವ ತಿಳುವಳಿಕೆ ಪೊಲೀಸರು ಹೇಳುವ ಮಾತುಗಳಿಗಿಂತ ಹೆಚ್ಚು ಪರಿಣಾಮಕಾರಿ ಎಂದು ಅವರು ತಿಳಿಸಿದ್ದಾರೆ.

Leave a Reply

comments

Related Articles

error: