ಕರ್ನಾಟಕದೇಶಪ್ರಮುಖ ಸುದ್ದಿ

ದಕ್ಷಿಣ ನದಿಗಳ ಜೋಡಣೆಗಾಗಿ ಒಂದು ಕೋಟಿ ರೂ. ಸಹಾಯಧನ ನೀಡಿದ ಸೂಪರ್‌ ಸ್ಟಾರ್ ರಜನಿಕಾಂತ್‌

ದೇಶ(ಚೆನ್ನೈ)ಜೂ.19:- ತಮಿಳುನಾಡಿನಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಕೈ ಜೋಡಿಸಿರುವ ಸೂಪರ್‌ ಸ್ಟಾರ್ ರಜನಿಕಾಂತ್‌ ನದಿ ಜೋಡಣೆಗಾಗಿ 1 ಕೋಟಿ ರೂ. ಸಹಾಯಧನ ನೀಡಿದ್ದಾರೆ.

ತಮಿಳುನಾಡಿನ ರೈತರು ದಕ್ಷಿಣ ನದಿಗಳ ಜೋಡಣೆಗಾಗಿ ಒತ್ತಾಯಿಸಿ ಕಳೆದ ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದು, ರೈತರ ಗುಂಪೊಂದು ರಜನಿ ಅವರನ್ನು ಭೇಟಿ ಮಾಡಿತು. ಈ ವೇಳೆ ರಜನಿ ರೈತರಿಗೆ 1 ಕೋಟಿ ರೂ. ಚೆಕ್‌ ನೀಡಿದ್ದಾರೆ. ಮಹಾನದಿಗಳಾದ ಗೋದಾವರಿ, ಕೃಷ್ಣ, ಪಲರು ಮತ್ತು ಕಾವೇರಿ ನದಿ ಸೇರಿದಂತೆ ಪ್ರಮುಖ ನದಿಗಳ ಜೋಡಣೆಗಾಗಿ ರೈತರು ರಜನಿಯವರ ಬೆಂಬಲ ಕೋರಿದ್ದಾರೆ. ಈ ವೇಳೆ ಭರವಸೆ ನೀಡಿರುವ ರಜನಿ, ಇದಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿಯವರೊಂದಿಗೆ ಚರ್ಚೆ ನಡೆಸುವುದಾಗಿ ತಿಳಿಸಿದ್ದಾರೆ. ಈಗಾಗಲೇ ಸೂಪರ್‌ ಸ್ಟಾರ್‌ ರಜನಿಕಾಂತ್‌ ರಾಜಕೀಯಕ್ಕೆ ಬರುವುದಾಗಿ ಮೂನ್ಸೂಚನೆ ನೀಡಿದ್ದು, ಮುಂದಿನ ತಿಂಗಳು ಇದಕ್ಕೆ ಸಂಬಂಧಿಸಿದಂತೆ ಮಾಹಿತಿ ಹೊರಹಾಕುವ ಸಾಧ್ಯತೆ ಇದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: