ಕರ್ನಾಟಕಪ್ರಮುಖ ಸುದ್ದಿ

ಕಲ್ಲಡ್ಕ ಪ್ರಭಾಕರ ಭಟ್ ಕುರಿತು ವ್ಯಂಗ್ಯ : ಸಚಿವ ರಮಾನಾಥ್ ರೈ ವಿರುದ್ಧ ದೂರು

ರಾಜ್ಯ(ಮಂಗಳೂರು)ಜೂ.19:- ಬಂಟ್ವಾಳ ಸಮೀಪದ ಕಲ್ಲಡ್ಕದಲ್ಲಿನ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ  ಆರ್ ಎಸ್ ಎಸ್  ಮುಖಂಡ ಡಾ. ಪ್ರಭಾಕರ್ ಭಟ್ ರ ವ್ಯಂಗ್ಯ ಹಿನ್ನೆಲೆಯಲ್ಲಿ ಸಚಿವ ಬಿ. ರಮಾನಾಥ  ರೈ ವಿರುದ್ಧ ದೂರು ದಾಖಲಾಗಿದೆ.

ದಕ್ಷಿಣ ಕನ್ನಡ ಜಿಲ್ಲಾ  ಪೊಲೀಸ್ ವರಿಷ್ಠಾಧಿಕಾರಿ ಜೊತೆ ಮಾತುಕತೆಯ ವೇಳೆ ಬಿ. ರಮಾನಾಥ್ ರೈ  ಪ್ರಭಾಕರ ಭಟ್ ಒಬ್ಬ ಪುಕ್ಕಲ, ಅವನನ್ನು ನಾನೇ ಓಡಿಸಿಕೊಂಡು ಹೋಗಿದ್ದೆ ಎಂದಿದ್ದರು. ಈ ಕುರಿತು ಬಿಜೆಪಿ ಜಿಲ್ಲಾ ಪರಿಶಿಷ್ಟ ಜಾತಿ ಮೋರ್ಚಾ ಜಿಲ್ಲಾಧ್ಯಕ್ಷ ದಿನೇಶ್ ಅಮ್ಟೂರು ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: