ಮೈಸೂರು

ಪ್ರೇಕ್ಷಕರ ರಂಜಿಸಿದ ಜಾವೇದ್ ಅಲಿ ಗಾನಸುಧೆ

yuvadasara-web-25ನೇ ದಿನದ ಯುವ ದಸರಾದಲ್ಲಿ ಬಾಲಿವುಡ್‍ನ ಕವ್ವಾಲಿ ಗಾಯಕ ಜಾವೇದ್ ಅಲಿ ಅವರ ಗಾನಸುಧೆಯು ನೆರೆದಿದ್ದವರ ಮನಸೂರೆಗೊಳ್ಳುವಂತೆ ಮಾಡಿತು.

ಶುಕ್ರವಾರ ಸಂಜೆ ಮಹಾರಜ ಕಾಲೇಜು ಮೈದಾನದಲ್ಲಿ ನಡೆದ ಯುವದಸರಾ ಕಾರ್ಯಕ್ರಮದಲ್ಲಿ ಸುಲ್ತಾನ್ ಚಿತ್ರದ ‘ ಜಬ್ ಹೂಮೇ ಅಸಾರೆ ಜೈಸಾನೇ ಹೋಗಿ’, ಭಜರಂಗಿ ಭಾಯ್‍ಜಾನ್ ಚಿತ್ರದ ‘ತು ಜೋ ಮಿಲಾ’ ಗೀತೆಗಳನ್ನು ಹಾಡಿ ನೋಡುಗರನ್ನು ಮಂತ್ರಮುಗ್ಧರನ್ನಾಗಿಸಿದರು.

ಕನ್ನಡ ‘ರನ್ ಆ್ಯಂಟನಿ ರನ್’ ಚಿತ್ರದ ‘ಸೆಲೆ ಸೆಲೆ ನಗುವಿನ ಸೆಲೆ… ಬಲೆ ಬಲೆ ನೆನಪಿನ ಬಲೆ’ ಹಾಡುಗಳನ್ನು ಹಾಡಿ ರಂಜಿಸಿದರು.

ಮೈಸೂರು ಪೇಟ ಧರಿಸಿ ವೇದಿಕೆಗೆ ಆಗಮಿಸಿದ ಜಾವೇದ್ ಅಲಿ, “ಇದೇ ಮೊದಲ ಬಾರಿಗೆ ಮೈಸೂರಿಗೆ ಬಂದಿದ್ದೇನೆ. ಎಲ್ಲರಿಗೂ ದಸರಾದ ಶುಭಾಶಯಗಳು” ಎಂದು ಹೇಳಿ ಕಾರ್ಯಕ್ರಮ ಆರಂಭಿಸಿದರು.

 

Leave a Reply

comments

Related Articles

error: